ಗೋಣಿಕೊಪ್ಪ ವರದಿ, ಮಾ. ೧೭: ವೀರಾಜಪೇಟೆ ತಾಲೂಕಿನ ಬಿತ್ತನೆ ಬೀಜ, ರಸಗೊಬ್ಬರ, ಪೀಡೆ ನಾಶಕ ಮಾರಾಟಗಾರರಿಗೆ ತಾ. ೨೨ ರಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ವೀರಾಜಪೇಟೆ ತಾಲೂಕು ಕೃಷಿ ನಿರ್ದೇಶಕರ ಕಚೇರಿ ವತಿಯಿಂದ ಕಾರ್ಯಾಗಾರ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ ೧೦ ಗಂಟೆಗೆ ಕಾರ್ಯಾಗಾರ ಆರಂಭಗೊಳ್ಳಲಿದ್ದು, ಗುಣಮಟ್ಟ ನಿಯಂತ್ರಣದ ಬಗ್ಗೆ ವಿಶೇಷವಾಗಿ ಸಲಹೆ ನೀಡಲಾಗುತ್ತದೆ. ಕೆ. ಕಿಸಾನ್ನಲ್ಲಿ ಪರವಾನಗಿ ಪಡೆಯುವುದು, ಪಿಒಎಸ್ ಉಪಕರಣದ ಮಾರ್ಗಸೂಚಿ, ಪಿಒಎಸ್ ಉಪಕರಣಕ್ಕೆ ಬಯೊಮೆಟ್ರಿಕ್ ಅಳವಡಿಸುವುದು ಮತ್ತು ಬಳಸುವ ವಿಧಾನ, ಪೀಡೆ ನಾಶಕ ಕಾಯ್ದೆ ೧೯೬೮ ಮತ್ತು ರಸಗೊಬ್ಬರ ನಿಯಂತ್ರಣ ಆಜ್ಞೆ ೧೯೮೩ ಬಗ್ಗೆ ತರಬೇತಿ, ಕೀಟ ಮತ್ತು ರೋಗ ನಾಶಕಗಳ ಬಗ್ಗೆ ನೂತನವಾಗಿರುವ ಮಾಹಿತಿ ನೀಡಲಾಗುತ್ತದೆ ಎಂದು ತಾಲೂಕು ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.