ಸಮಸ್ಯೆ ಬಗೆಹರಿಸಲು ಮನವಿ

ಮಡಿಕೇರಿ, ಮಾ. ೧೭; ಮಡಿಕೇರಿ ಸನಿಹದ ಒಂದನೇ ಮೊಣ್ಣಂಗೇರಿಯ ಫೈರಿಂಗ್ ರೇಂಜ್ ಬಳಿ ಜಿಲ್ಲಾ ಪಂಚಾಯ್ತಿ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾದ ಕುಡಿಯುವ ನೀರಿನ ಯೋಜನೆ ನಿರರ್ಥಕಗೊಂಡಿದ್ದು, ಅಲ್ಲಿನ ನಿವಾಸಿಗಳು ನೀರಿಗಾಗಿ ಪರದಾಡುವಂತಾಗಿದ್ದು, ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ರೈಫಲ್ ರೇಂಜ್ ಬಳಿ ಎಂಟು ಕಾರ್ಮಿಕ ಕುಟುಂಬಗಳು ನೆಲೆಸಿದ್ದು, ಬಹಳ ವರ್ಷಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ೨೦೧೮ರಲ್ಲಿ ಜಿಲ್ಲಾ ಪಂಚಾಯ್ತಿ ವತಿಯಿಂದ ಕುಡಿಯುವ ನೀರಿನ ಯೋಜನೆ ರೂಪಿಸಿ ನೀರಿನ ಟ್ಯಾಂಕ್ ನಿರ್ಮಿಸಿ ಕೊಳವೆ ಬಾವಿ ಕೊರೆಯಲಾಗಿದೆ. ಆದರೆ, ನಾಲ್ಕು ವರ್ಷ ಕಳೆದರೂ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಟ್ಯಾಂಕ್‌ಗೆ ಇನ್ನೂ ಕೂಡ ನೀರು ಹರಿದಿಲ್ಲ. ಈ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಮುಂದುವರಿದಿದ್ದು, ಸಂಬAಧಿಸಿದವರು ಇತ್ತ ಗಮನ ಹರಿಸಿ ಎಂದು ಅಲ್ಲಿನ ನಿವಾಸಿಗಳು ಮನವಿ ಮಾಡಿಕೊಂಡಿದ್ದಾರೆ.