ಮಡಿಕೇರಿ, ಮಾ. ೧೭: ವನ್ಯಪ್ರಾಣಿ - ಮಾನವ ಸಂಘರ್ಷದ ತೊಯ್ದಾಟ ಕೊಡಗಿನಲ್ಲಿ ಮತ್ತಷ್ಟು ಗಂಭೀರವೇ ಆಗುತ್ತಿದೆ. ಜಿಲ್ಲೆಯ ಅಲ್ಲಲ್ಲಿ ವನ್ಯಪ್ರಾಣಿಗಳು ಮಾನವ - ಜಾನುವಾರು - ವಾಹನಗಳ ಮೇಲೆ ದಾಳಿ ನಡೆಸುತ್ತಿದ್ದು, ಜನತೆ ಭೀತಿಯ ವಾತಾವರಣದಲ್ಲಿ ದಿನ ಕಳೆಯುತ್ತಿದ್ದಾರೆ. ರೈತರು ಶಾಲಾ ಮಕ್ಕಳು, ಕಾರ್ಮಿಕರ ಪರಿಸ್ಥಿತಿಯೂ ಆತಂಕದಲ್ಲಿದೆ.
ಇAತಹ ಸಂದಿಗ್ಧತೆಯ ನಡುವೆ ಕೆಲವು ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಜನತೆಯನ್ನು ಇನ್ನಷ್ಟು ಹೆದರಿಸುವಂತಹ ಹೀನ ಕೆಲಸ ಮಾಡುತ್ತಿದ್ದಾರೆ. ಯಾವ್ಯಾವದೋ ಭಾಗದ ವನ್ಯಪ್ರಾಣಿಗಳ ವೀಡಿಯೋಗಳನ್ನು ಎಡಿಟ್ ಮಾಡುವ ಮೂಲಕ ಫೋಟೋಶಾಪ್ ಮೂಲಕ ದುರ್ಬಳಕೆ ಮಾಡಿಕೊಂಡು ಇದು ಕೊಡಗಿನಲ್ಲಿನ ಘಟನೆಗಳು ಎಂಬAತೆ ಸಂದೇಶ ಹರಿಯ ಬಿಡುತ್ತಿದ್ದಾರೆ. ಇದು ವಿಕೃತ ಮನಸ್ಸಿನ ಈ ವ್ಯಕ್ತಿಗಳ ಕುಹಕತನವೋ... ಕಿಡಿಗೇಡಿತನವೋ ಗೊತ್ತಿಲ್ಲ. ಮೊದಲೇ ಭಯದಲ್ಲಿರುವ ಜನರು ಇದನ್ನು ನಿಜವೆಂಬAತೆ ನಂಬಿ ಮತ್ತೆ ಫಾರ್‌ವರ್ಡ್ ಮಾಡುವ ಮೂಲಕ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ.
ಇತ್ತೀಚೆಗೆ ಹುದಿಕೇರಿ ಮುಖ್ಯರಸ್ತೆಯಲ್ಲಿ ಹುಲಿ ತಿರುಗಾಡುತ್ತಿದೆ ಎಂಬ ವೀಡಿಯೋ ಒಂದು ಗೊಂದಲ ಮೂಡಿಸಿತ್ತು. ಇದೀಗ ಕೆಲ ದಿನಗಳಿಂದ ಕರಡ ವಿಭಾಗದಲ್ಲಿ ಬೈಕ್ ಸವಾರರ ಮೇಲೆ ಚಿರತೆಯೊಂದು ಮುಖ್ಯರಸ್ತೆಯಲ್ಲಿ ದಾಳಿ ಮಾಡುವಂತಹ ವೀಡಿಯೋವೊಂದು ಹರಿದಾಡುತ್ತಿದೆ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿರುವವರ ಬಗ್ಗೆ ಕಠಿಣ ಕ್ರಮಕೈಗೊಳ್ಳು ವಂತಾಗಬೇಕು. ಜನತೆಯೂ ಇಂತಹ ವೀಡಿಯೋಗಳನ್ನು ಮತ್ತೆ ಫಾರ್‌ವರ್ಡ್ ಮಾಡುವ ಮುನ್ನ ಸತ್ಯಾಸತ್ಯತೆಯನ್ನು ಅರಿತುಕೊಳ್ಳು ವಂತಾಗಬೇಕಿದೆ. ಈ ಬಗ್ಗೆ ಸೈಬರ್ ಕ್ರೆöÊಂ ಮೂಲಕವೂ ನಿಗಾ ವಹಿಸುವ ಅಗತ್ಯತೆಯಿದ್ದು, ಜನತೆ ಜಾಗೃತೆಯಿಂದಿರಬೇಕಾಗಿದೆ.
ಇದು ಒಂದೆಡೆಯಾದರೆ ಕಳೆದ ವರ್ಷದ ಲಾಕ್‌ಡೌನ್‌ನ ಹೇರಿಕೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಯ ವೀಡಿಯೋವೊಂದನ್ನು ಕಿಡಿಗೇಡಿಗಳು ಇದು ಹೊಸತೆಂಬAತೆ ವ್ಯಾಟ್ಸಾಪ್‌ಗಳಲ್ಲಿ ಹರಿಯಬಿಟ್ಟಿದ್ದು, ಇದೂ ಕೂಡ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವಂತಾಗಿದೆ. ಸತ್ಯಾಸತ್ಯತೆಯನ್ನು ಅರಿತು ಜನರು ಗೊಂದಲಗೊಳ್ಳದಿರುವದು ಹಾಗೂ ಇತರರನ್ನೂ ಗೊಂದಲಕ್ಕೀಡು ಮಾಡದಿರುವದು ಒಳಿತು.
- ಶಶಿ