ಪೆರಾಜೆ, ಮಾ. ೧೭: ಗೌಡ ಗ್ರಾಮ ಸಮಿತಿ ವತಿಯಿಂದ ಏ. ೬ ರಿಂದ ಏ. ೧೪ರ ವರೆಗೆ ಪೆರಾಜೆಯ ಶ್ರೀ ಕಾವೇರಿ ಗದ್ದೆಯಲ್ಲಿ ಕೊಡಗು-ದಕ್ಷಿಣ ಕನ್ನಡ ಗೌಡ ಕುಟುಂಬ ಗಳ ನಡುವಿನ ‘ಪೆರಾಜೆ ಗೌಡ ಕಪ್ ಕ್ರಿಕೆಟ್ ಹಬ್ಬ-೨೦೨೧’ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪದ್ಮಯ್ಯ ಕುಂಬಳಚೇರಿ, ಶಾಸ್ತಾವು ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕ್ರೀಡಾಕೂಟದಏ. ೬ ರಿಂದ ಪೆರಾಜೆ ಗೌಡಕಪ್ ಕ್ರಿಕೆಟ್(ಮೊದಲ ಪುಟದಿಂದ) ಪೂರ್ವಭಾವಿ ಸಭೆಯಲ್ಲಿ ತಿಳಿಸಿದರು. ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳಿಗೆ ಸೀಮಿತವಾಗಿ ನಡೆಸಿಕೊಂಡು ಬಂದಿರುವ ಟೆನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಈ ಬಾರಿ ೬೪ ಕುಟುಂಬಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಮೊದಲು ನೋಂದಾಯಿಸಿ, ಪ್ರವೇಶ ಶುಲ್ಕವನ್ನು ಪಾವತಿಸಿದ ಕುಟುಂಬ ತಂಡಗಳನ್ನು ಆಡಿಸಲಾಗುವುದು ಎಂದು ಮಾಹಿತಿ ನೀಡಿದರು. ಪ್ರಥಮ ಸ್ಥಾನ ಪಡೆದ ತಂಡಕ್ಕೆ ೨೦ ಸಾವಿರ ರೂ. ಮತ್ತು ಟ್ರೋಫಿ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ೧೨ ಸಾವಿರ ರೂ. ಮತ್ತು ಟ್ರೋಫಿ, ಸೆಮಿಫೈನಲ್‌ನಲ್ಲಿ ಸೆಣೆಸಾಡುವ ಎರಡು ತಂಡಗಳಿಗೆ ತಲಾ ೫ ಸಾವಿರ ರೂ. ನೀಡಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭ ಸಂಘದ ಪದಾಧಿಕಾರಿಗಳಾದ ಪ್ರವೀಣ್ ಬಂಗಾರಕೋಡಿ, ಮನೋಜ್ ನಿಡ್ಯಮಲೆ, ರಕ್ಷಿತ್ ಬಂಗಾರಕೋಡಿ, ಉದಯಚಂದ್ರ ಕುಂಬಳಚೇರಿ, ಅನಿಲ್ ಕುಂಬಳಚೇರಿ, ಪ್ರದೀಪ್ ಕುಂಬಳಚೇರಿ ಸೇರಿದಂತೆ ಇತರರು ಇದ್ದರು.