ಗೋಣಿಕೊಪ್ಪಲು, ಮಾ. ೧೭ : ಜೀವ ಹಾನಿ ಮಾಡುವುದರೊಂದಿಗೆ ಭಯಾನಕ ವಾತಾವರಣ ಸೃಷ್ಟಿಸಿರುವ ಹುಲಿಯನ್ನು ಹಿಡಿಯುವ ಸಲುವಾಗಿ ಇದೀಗ ಅರಣ್ಯ ಇಲಾಖೆಯ ಸಿಬ್ಬಂದಿಗಳು ವಿವಿಧ ಭಾಗಗಳಲ್ಲಿ ಪಂಜರಗಳನ್ನು ಅಳವಡಿಕೆ ಗೋಣಿಕೊಪ್ಪಲು, ಮಾ. ೧೭ : ಜೀವ ಹಾನಿ ಮಾಡುವುದರೊಂದಿಗೆ ಭಯಾನಕ ವಾತಾವರಣ ಸೃಷ್ಟಿಸಿರುವ ಹುಲಿಯನ್ನು ಹಿಡಿಯುವ ಸಲುವಾಗಿ ಇದೀಗ ಅರಣ್ಯ ಇಲಾಖೆಯ ಸಿಬ್ಬಂದಿಗಳು ವಿವಿಧ ಭಾಗಗಳಲ್ಲಿ ಪಂಜರಗಳನ್ನು ಅಳವಡಿಕೆ ಪಂಜರದ ಸಮೀಪದಲ್ಲಿ ಕ್ಯಾಮರಾಗಳನ್ನು ಅಳವಡಿಕೆ ಮಾಡಲಾಗಿದ್ದು ಹುಲಿಯ ಚಲನವಲನಗಳನ್ನು ಗಮನಿಸ ಲಾಗುತ್ತಿದೆ. ಈ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಹುಲಿಯ ಸಂಚಾರದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಹುಲಿಯ ಹೆಜ್ಜೆ ಗುರುತುಗಳನ್ನು ಗುರುತಿಸಲ್ಪಡುವ ಅನುಭವಿ ಟ್ರ‍್ಯಾಕರ್ ಗಳು ದಿನಗಟ್ಟಲೇ ಹಲವು ಕಿ.ಮೀ. ನಡೆಯುತ್ತಲೇ ಹುಡುಕಾಟ ಮಾಡುತ್ತಿದ್ದಾರೆ.

ಹುಲಿಯನ್ನು ಹಿಡಿಯಲು ಆರು ತಂಡಗಳು ವಿಶೇಷ ಪ್ರಯತ್ನ ಮುಂದುವರಿಸಿದೆ.

ಅಧಿಕಾರಿಗಳು ಬೆಳ್ಳೂರು

ಗ್ರಾಮದ ಕ್ಯಾಂಪ್ ನಲ್ಲಿ ಮೊಕ್ಕಂ ಹೂಡಿದ್ದು ಸಿಬ್ಬಂದಿಗಳಿAದ ಪ್ರತಿ ಕ್ಷಣದ ಮಾಹಿತಿಗಳನ್ನು ಪಡೆಯುತ್ತಿದ್ದಾರೆ.

(ಮೊದಲ ಪುಟದಿಂದ) ಕೋತೂರು ಸಮೀಪದ ಬೊಮ್ಮಾಡು ಬಳಿಯಲ್ಲಿ ಹುಲಿಯ ಸಂಚಾರ ಕಂಡುಬAದಿದೆ. ಗ್ರಾಮದ ಬಾಚಮಂಡ ಸೋಮೇಶ್ ಅವರ ಕೆರೆ ಏರಿಯ ಮೇಲೆ ಹುಲಿಯು ನಡೆದುಕೊಂಡು ಹೋಗಿರುವ ಬಗ್ಗೆ ಹೆಜ್ಜೆ ಗುರುತುಗಳು ಕಂಡುಬAದಿದೆ. ಮಾಲೀಕರು ಬೆಳಿಗ್ಗೆ ಈ ಭಾಗದಲ್ಲಿ ಸಂಚಾರ ಮಾಡುವ ಸಂದರ್ಭ ಹೆಜ್ಜೆ ಗುರುತು ಗಳನ್ನು ಕಂಡಿದ್ದಾರೆ ಎಂದು ಅವರ ಆತ್ಮೀಯರಾದ ಮನ್ನಕ್ಕಮನೆ ಬಾಲಕೃಷ್ಣ ಮಾಹಿತಿ ನೀಡಿದ್ದಾರೆ.

ಕಳೆದ ೧೧ ದಿನಗಳಿಂದ ಅಹೋ ರಾತ್ರಿ ಪ್ರತಿಭಟನೆ ಮುಂದುವರಿಯುತ್ತಿದ್ದು ಸುತ್ತಮುತ್ತಲಿನ ಗ್ರಾಮಗಳ ಜನತೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.ಬೆಳ್ಳೂರು ಜಂಕ್ಷನ್ ಬಳಿ ರೈತ ಸಂಘ ಪದಾಧಿಕಾರಿಗಳು ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.ಹುಲಿಯ ಕಾರ್ಯಾಚರಣೆ ವೇಳೆ ಶಾರ್ಪ್ ಶೂಟರ್ ಗಳೊಂದಿಗೆ ತೆರಳಿದ್ದ ಟಿ. ಶೆಟ್ಟಿಗೇರಿಯ ಕಂಬ ಕರುಂಬಯ್ಯ ಹಾಗೂ ಗ್ರಾಮದ ಜನತೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಹುಲಿ ಕಾರ್ಯಾಚರಣೆ ವೇಳೆ ಎದುರಾಗುವ ಸಮಸ್ಯೆಗಳನ್ನು ವಿವರಿಸಿದರು.

ಪ್ರತಿಭಟನಾ ಸಭೆಯಲ್ಲಿ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಹುದಿಕೇರಿ ಹೋಬಳಿ ಅಧ್ಯಕ್ಷ ಚಂಗುಲAಡ ಸೂರಜ್,ಶ್ರೀಮಂಗಲ ಹೋಬಳಿ ಅಧ್ಯಕ್ಷ ಚಟ್ಟಂಗಡ ಕಂಬ ಕಾರ್ಯಪ್ಪ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

- (ಹೆಚ್.ಕೆ.ಜಗದೀಶ್)

ಕೊಳಕೇರಿಯಲ್ಲಿ ಹುಲಿ ದಾಳಿಗೆ ಹಸು ಬಲಿ

ನಾಪೋಕು : ನಾಪೋಕ್ಲು ಗ್ರಾಮ ಪಂಚಾಯಿತಿಗೆ ಒಳಪಟ್ಟ ಕೊಳಕೇರಿ ಗ್ರಾಮದ ಮೈತಿಕಡು ಎಂಬಲ್ಲಿ ಹುಲಿ ಹಸುವನ್ನು ಕೊಂದು ಹಾಕಿರುವ ಘಟನೆ ನಡೆದಿದೆ.

ಸ್ಥಳೀಯರಾದ ಎಂ.ಹೆಚ್. ಇಬ್ರಾಹಿಂ ಎಂಬವರು ಕೆಲಸದ ನಿಮಿತ್ತ ಮಂಗಳೂರಿಗೆ ತೆರಳುವ ವೇಳೆ ಬುಧವಾರ ಮುಂಜಾನೆ ಮನೆ ಸಮೀಪದ ಕಕ್ಕಬೆ ಹೊಳೆ ತೀರದಲ್ಲಿ ತಮ್ಮ ಹಸುವನ್ನು ಮೇಯಲು ಕಟ್ಟಿಹಾಕಿ ತೆರಳಿದ್ದರು. ೯ ಗಂಟೆ ಸುಮಾರಿಗೆ ಹಸುವನ್ನು ಕೊಂದಿರುವ ಹುಲಿ ಸ್ವಲ್ಪ ಭಾಗ ತಿಂದು ಹಾಕಿರುವದು ಕಂಡುಬAದಿದೆ.

ದಕ್ಷಿಣ ಕೊಡಗಿನಲ್ಲಿ ಹುಲಿ ಮೂವರ ಪ್ರಾಣ ತೆಗೆದು ಹಲವಾರು ಜಾನುವಾರುಗಳನ್ನು ತಿಂದು ಹಾಕಿರುವ ಬಗ್ಗೆ ಪ್ರತಿಭಟನೆ ನಡೆಯುತ್ತಿರುವಾಗಲೇ ಇಲ್ಲಿಯೂ ಹುಲಿ ಕಾಣಿಸಿಕೊಂಡಿರುವದು ಜನರನ್ನು ಆತಂಕಕ್ಕೀಡುಮಾಡಿದೆ. ಹುಲಿ ಬಂದಿರುವ ಸುದ್ದಿ ಕೇಳಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಮನೆಯಿಂದ ಹೊರ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.

ಘಟನಾ ಸ್ಥಳಕ್ಕೆ ವಲಯ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್, ಸಿಬ್ಬಂದಿಗಳಾದ ಕಾಳೇಗೌಡ, ಸೋಮಣ್ಣ ಗೌಡ, ನಾಪೋಕ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಖುರೇಶಿ, ಸದಸ್ಯರಾದ ಕಾಳೆಯಂಡ ಸಾಬಾ ತಿಮ್ಮಯ್ಯ, ಬಿ.ಎಂ. ಪ್ರತೀಪ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹುಲಿ ಧಾಳಿಯಿಂದ ಜನರು ಭಯಬೀತರಾಗಿದ್ದಾರೆ. ಅರಣ್ಯ ಇಲಾಖೆ ಕೂಡಲೇ ಹುಲಿಯನ್ನು ಸೆರೆ ಹಿಡಿಯಲು ಕ್ರಮಕೈಗೊಳ್ಳಬೇಕು ಎಂದು ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ಕೆ.ಯು.ಅಶ್ರಫ್ ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ. -ಪಿ.ವಿ. ಪ್ರಭಾಕರ್