ಮಡಿಕೇರಿ, ಮಾ. ೧೭: ರಾಷ್ಟಿçÃಯ ಭದ್ರತಾದಳ (ಎನ್.ಎಸ್.ಜಿ)ದ ಮುಖ್ಯಸ್ಥರಾಗಿ ಕೊಡಗು ಜಿಲ್ಲೆಯ ಮೂಲದವರಾದ ಹಿರಿಯ ಐ.ಪಿ.ಎಸ್. ಅಧಿಕಾರಿಯಾಗಿರುವ ಮನೆಯಪಂಡ ಎ. ಗಣಪತಿ ಅವರು ನಿಯುಕ್ತಿಗೊಂಡಿದ್ದಾರೆ. ಪ್ರತಿಷ್ಠಿತವಾದ ಈ ಹುದ್ದೆಗೆ ಕೊಡಗಿನ ಅಧಿಕಾರಿಯೊಬ್ಬರು ಆಯ್ಕೆಗೊಂಡಿರುವದು ಜಿಲ್ಲೆಗೆ ಹೆಮ್ಮೆಯ ವಿಚಾರವಾಗಿದೆ.ಗಣಪತಿ ಅವರ ನೇಮಕದ ಬಗ್ಗೆ ಕೇಂದ್ರ ಸಿಬ್ಬಂದಿ ಸಚಿವಾಲಯ ಆದೇಶ ಹೊರಡಿಸಿದ್ದು, ಇವರು ೨೦೨೪ರ ಫೆಬ್ರವರಿ ೨೯ರವರೆಗೆ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಭಯೋತ್ಪಾದಕ ನಿಗ್ರಹ ಚಟುವಟಿಕೆ ನಡೆಸುವ ಎನ್‌ಎಸ್‌ಜಿ ಮಹಾನಿರ್ದೇಶಕ (ಡೈರೆಕ್ಟರ್ ಜನರಲ್) ಹುದ್ದೆಯು ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ವಾಯುಪಡೆಯ ಏರ್‌ಮಾರ್ಷಲ್ ಹಾಗೂ ನೌಕಾಪಡೆಯ ಹುದ್ದೆಯಾದ ವೈಸ್ ಅಡ್ಮಿರಲ್ ಸ್ಥಾನಕ್ಕೆ ಸರಿಸಾಟಿಯಾದದ್ದು. ಇಂತಹ ಸ್ಥಾನಕ್ಕೆ ಗಣಪತಿ ಅವರು ಆಯ್ಕೆಯಾಗಿರುವದು ಕರ್ನಾಟಕಕ್ಕೂ ಪ್ರತಿಷ್ಠೆಯಾಗಿದೆ.

ಪೊನ್ನಂಪೇಟೆಯ ಮೂಲದವರುಗಣಪತಿ ಅವರು ಪೊನ್ನಂಪೇಟೆ ಸನಿಹದ ಕುಂದ ಈಚೂರಿನವರಾದ ವಕೀಲ ಮನೆಯಪಂಡ ವಿಠಲ್ ಅಪ್ಪಯ್ಯ ಹಾಗೂ

(ಮೊದಲ ಪುಟದಿಂದ) ನಿವೃತ್ತ ಅಧ್ಯಾಪಕಿ ಪ್ರೇಮ (ತಾಮನೆ : ಪಟ್ಟಡ) ಅವರ ಪುತ್ರರಾಗಿದ್ದಾರೆ. ‘ಶಕ್ತಿ’ಯೊಂದಿಗೆ ಮಾತನಾಡಿದ ಗಣಪತಿ ಅವರು ತಾವು ವೀರಾಜಪೇಟೆ ಸೆಂಟ್ ಆ್ಯನ್ಸ್ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಹಾಗೂ ಪ್ರೌಢ ಶಿಕ್ಷಣವನ್ನು ಪೊನ್ನಂಪೇಟೆ ಸರಕಾರಿ ಪ್ರೌಢಶಾಲೆಯಲ್ಲಿ ಪೂರೈಸಿರುವದಾಗಿ ನೆನಪಿಸಿಕೊಂಡರು. ಇವರು ಇದೀಗ ಈ ಸ್ಥಾನಕ್ಕೆ ಆಯ್ಕೆಯಾಗಿರುವದು ಇತರರಿಗೆ ಮಾದರಿಯಾಗಿದೆ.

೧೯೮೬ರ ಬ್ಯಾಚ್‌ನ ಉತ್ತರಾಖಾಂಡ್ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿರುವ ಗಣಪತಿ ಅವರು ಪ್ರಸ್ತುತ ನಾಗರಿಕ ವಿಮಾನಯಾನ (ಸಿವಿಲ್ ಏವಿಯೇಷನ್)ದ ಭದ್ರತಾ ಬ್ಯೂರೋ ಮುಖ್ಯಸ್ಥರಾಗಿ ಕರ್ತವ್ಯ ನಿಭಾಯಿಸುತ್ತಿದ್ದರು. ಕೇಂದ್ರ ಗೃಹ ಸಚಿವಾಲಯದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿರುವ ಇವರು ಈ ಹಿಂದೆ ಉತ್ತರಾಖಾಂಡ್‌ನ ಡಿ.ಜಿ.ಪಿಯೂ ಆಗಿದ್ದರು.

೧೯೮೬ರಲ್ಲಿ ಸ್ಥಾಪನೆ

ನ್ಯಾಷನಲ್ ಸೆಕ್ಯುರಿಟಿ ಗ್ರೂಪ್ (ರಾಷ್ಟಿçÃಯ ಭದ್ರತಾದಳ) ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಕೆಲಸ ಮಾಡುವ ಸಂಸ್ಥೆ. ಇದು ಭಯೋತ್ಪಾದಕ ನಿಗ್ರಹ ಪಡೆಯಾಗಿದ್ದು, ಅಂದಿನ ಪ್ರಧಾನಿ ಇಂದಿರಾಗಾAಧಿ ಹತ್ಯೆ ಹಾಗೂ ಆಪರೇಷನ್ ಬ್ಲೂಸ್ಟಾರ್ ಬಳಿಕ ೧೯೮೬ರಲ್ಲಿ ಸ್ಥಾಪನೆಯಾಗಿದೆ. ಮುಂಬೈಯಲ್ಲಿ ೨೦೧೧ರಲ್ಲಿ ಭಯೋತ್ಪಾದಕ ದಾಳಿ ಸಂಭವಿಸಿದಾಗ ಪಾಕಿಸ್ತಾನದ ಉಗ್ರರ ಹುಟ್ಟಡಗಿಸಿದ್ದು, ಕೂಡ ಎನ್.ಎಸ್.ಜಿಯಾಗಿದೆ.