ಮಡಿಕೇರಿ, ಮಾ. ೧೬: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ವೀರಾಜಪೇಟೆಯ ಕಾವೇರಿ ಕಾಲೇಜಿನ ಸಹಯೋಗದೊಂದಿಗೆ ಕೊಡವ ಪಾಜೆ ತರ್ಜುಮೆ ಕಾರ್ಯಾಗಾರ ಏರ್ಪಡಿಸಲಾಗಿದೆ. ತಾ. ೧೭ ರಂದು (ಇಂದು) ಬೆಳಿಗ್ಗೆ ೧೦ ಗಂಟೆಗೆ ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ನಡೆಯಲಿರುವ ಕಾರ್ಯಾಗಾರವನ್ನು ಸಾಹಿತಿ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ ಉದ್ಘಾಟಿಸುವರು.
ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ತರ್ಜುಮೆ ಸಾಹಿತ್ಯತ್ರ ಅವಶ್ಯಕತೆ ಎಂಬ ವಿಚಾರದಲ್ಲಿ ಡಾ.ಉಳ್ಳಿಯಡ ಎಂ.ಪೂವಯ್ಯ, ಕೊಡವ ಪಾಜೆರ ತರ್ಜುಮೆ-ಕ್ರಮ ಕುರಿತಾಗಿ ಅಜ್ಜಿನಿಕಂಡ ಪಮೀಳಾ ನಾಚಯ್ಯ, ತರ್ಜುಮೆ ಸಾಹಿತ್ಯತ್ ರ ಸವಾಲ್ ವಿಷಯವಾಗಿ ನಾಗೇಶ್ ಕಾಲೂರ್ ವಿಷಯ ಮಂಡನೆ ಮಾಡಲಿದ್ದಾರೆ.
ನಂತರ ನಡೆಯಲಿರುವ ಚರ್ಚೆಯಲ್ಲಿ ಬಾಚರಣಿಯಂಡ ಅಪ್ಪಣ್ಣ, ಡಾ. ತೀತಮಾಡ ಪೂವಮ್ಮ, ಡಾ.ಮುಲ್ಲೇಂಗಡ ರೇವತಿ ಪೂವಯ್ಯ ಪಾಲ್ಗೊಳ್ಳಲಿದ್ದಾರೆ.