ಕೂಡಿಗೆ, ಮಾ. ೧೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಸಮೀಪದಲ್ಲಿರುವ ಹಾರಂಗಿ ಮುಖ್ಯ ನಾಲೆಗೆ ಅಡಿಯಾಗಿ ಸೇತುವೆಯನ್ನು ನಿರ್ಮಿಸಿ ೫೦ ವರ್ಷಗಳೇ ಕಳೆದಿದೆ. ಇದೀಗ ಈ ಮುಖ್ಯ ನಾಲೆಯ ಸೇತುವೆಯು ಬೀಳುವ ಹಂತವನ್ನು ತಲುಪಿದೆ.
ಸೇತುವೆಯು ಕಾವೇರಿ ನೀರಾವರಿ ನಿಗಮದ ಅಧೀನಕ್ಕೆ ಒಳಪಡುವುದರಿಂದ ಅಧಿಕಾರಿಗಳು ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ಅಲ್ಲದೆ ಸೇತುವೆಯು ೧೨ ಗ್ರಾಮಗಳ ಸಂಪರ್ಕ ಕಲ್ಪಿಸುತ್ತದೆ. ಜೊತೆಗೆ ಕುಶಾಲನಗರ, ಸೋಮವಾರಪೇಟೆ ನಗರಕ್ಕೆ ಹತ್ತಿರದ ಮಾರ್ಗವಾಗಿದೆ.
ಸರಕಾರವು ನಾಲೆಯ ದುರಸ್ತಿಗೆ ಹಣ ಬಿಡುಗಡೆ ಮಾಡಿರುವ ಕ್ರಿಯಾ ಯೋಜನೆ ಕಾಮಗಾರಿಯಲ್ಲಿ ನೂತನವಾಗಿ ಸೇತುವೆಯನ್ನು ನಿರ್ಮಾಣ ಮಾಡಬೇಕೆಂದು ಸ್ಥಳೀಯ ಗ್ರಾಮಸ್ಥರು, ಜಿಲ್ಲಾ ದಲಿತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಅಣ್ಣಯ್ಯ, ಪ್ರಮುಖರಾದ ಗಣೇಶ್, ಕುಮಾರ, ರಾಜ, ವಿವಿಧ ಸಂಘ ಸಂಸ್ಥೆಗಳ ಪ್ರಮುಖರುಗಳಾದ ಕಿರಣ, ಹರೀಶ್, ಕುಮಾರ, ಸಿದ್ದಪ್ಪ ಸೇರಿದಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.