*ಗೋಣಿಕೊಪ್ಪಲು, ಮಾ. ೧೬: ತಿತಿಮತಿ ಕರಡಿಕೊಪ್ಪ ಮುತ್ತಪ್ಪ ದೇವರ ಉತ್ಸವ ತಾ. ೧೯, ೨೦ ಹಾಗೂ ೨೧ ರಂದು ನಡೆಸಲು ದೇವಸ್ಥಾನದ ಆಡಳಿತ ಮಂಡಳಿ ತೀರ್ಮಾನಿಸಿತ್ತು. ಆದರೆ ಕೊರೊನಾ ಹಿನ್ನೆಲೆ ಉತ್ಸವವನ್ನು ಮುಂದೂಡಲಾಗಿದೆ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದ್ದಾರೆ. ಉತ್ಸವದ ದಿನವನ್ನು ಮುಂದಿನ ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.