ಸ್ಥಳಾಂತರಿಸಲು ಆಗ್ರಹ

ನಾಪೋಕ್ಲು, ಮಾ. ೧೬: ನಾಪೋಕ್ಲು ಪೇಟೆಯಲ್ಲೇ ಮೀನು ಮತ್ತು ಹಂದಿ, ಕೋಳಿ, ಕುರಿ ಮಾಂಸಗಳನ್ನು ಮಾರಾಟ ಮಾಡುತ್ತಿದ್ದು ಗ್ರಾಮ ಪಂಚಾಯಿತಿ ಕೂಡಲೇ ಇವುಗಳನ್ನು ಈಗಾಗಲೆ ಮಾರುಕಟ್ಟೆಯಲ್ಲಿ ನಿರ್ಮಿಸಲಾದ ಮಳಿಗೆಗಳಿಗೆ ಸ್ಥಳಾಂತರಿಸಬೇಕೆAದು ನಾಪೋಕ್ಲು ವಾಹನ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎಂ.ಇ. ಅಬ್ದುಲ್ ರಜಾಕ್ ಒತ್ತಾಯಿಸಿದ್ದಾರೆ. ನಗರದಲ್ಲಿ ಇವುಗಳನ್ನು ಕಡಿದು ಮಾರಾಟ ಮಾಡುತ್ತಿರುವುದರಿಂದ ನಗರದಲ್ಲಿ ಅಶುಚಿತ್ವ ತಾಂಡವವಾಡುತ್ತಿದ್ದು ಮುಂದೆ ಇದರಿಂದ ರೋಗ ಬರುವ ಲಕ್ಷಣಗಳಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯವರು ಸೂಕ್ತ ಕ್ರಮಕೈಗೊಂಡು ಇದನ್ನು ಸ್ಥಳಾಂತರಿಸಲು ಗ್ರಾಮ ಪಂಚಾಯಿತಿಗೆ ಸೂಚಿಸಬೇಕೆಂದು ಹೇಳಿದ ಅವರು ಈ ತಿಂಗಳು ಗ್ರಾಮ ಪಂಚಾಯಿತಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು ಕೂಡಲೇ ಅಂಗಡಿಗಳನ್ನು ನಗರದಿಂದ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ