ವಾಹನದಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರೆ. ಈ ಭಾಗದ ಜನತೆ ಮನೆಯಿಂದ ಹೊರಬರಲು ಪರಿತಪಿಸುವಂತಾಗಿದೆ.
ಗ್ರಾಮಸ್ಥರಾದ ಬೊವ್ವೇರಿಯಂಡ ಲವಕುಮಾರ್ ಹಾಗೂ ಬಾಚಮಂಡ ಲೋಕೇಶ್ ಪತ್ರಿಕೆಯೊಂದಿಗೆ ಮಾಹಿತಿ ನೀಡಿದ್ದು, ವಾರದೊಳಗೆ ಕಾಡಾನೆಯನ್ನು ಕಾಡಿಗೆ ಅಟ್ಟಬೇಕು. ಕಾಡಾನೆ ಹಾವಳಿಯಿಂದ ಅತಂತ್ರರಾದ-ನಷ್ಟ ಅನುಭವಿಸಿದವರಿಗೆ ಸೂಕ್ತ ಪರಿಹಾರ ಒದಗಿಸಬೇಕು; ಕಾಡಾನೆಯ ಉಪಟಳಕ್ಕೆ ಖಾಯಂ ಪರಿಹಾರ ಒದಗಿಸಬೇಕು. ವಾರದೊಳಗೆ ಈ ಮೇಲಿನ ಮನವಿಗಳಿಗೆ ಅರಣ್ಯ ಅಧಿಕಾರಿಗಳು ಸ್ವಂದಿಸದಿದ್ದರೆ ನಾಪೋಕ್ಲು-ವೀರಾಜಪೇಟೆ ಮುಖ್ಯ ರಸ್ತೆ ತಡೆ ನಡೆಸಿ ಹೋರಾಟ ಮಾಡಲಾಗುವುದು. ಇದಕ್ಕೂ ಯಾವುದೇ ರೀತಿಯ ಪರಿಹಾರ ಸಿಗದಿದ್ದರೆ ಅರಣ್ಯ ಇಲಾಖೆ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ವರದಿ: ಸಿ.ಎ. ಅಶ್ರಫ್