ಮಡಿಕೇರಿ, ಮಾ. ೧೬ : ಜಿಲ್ಲೆಯಲ್ಲಿ ಮಂಗಳವಾರ ೨ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿದೆ. ೧ ಪ್ರಕರಣ ಆರ್‌ಟಿಪಿಸಿಆರ್ ಮತ್ತು ೧ ಪ್ರಕರಣ ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ.
ಮಡಿಕೇರಿ ತಾಲೂಕಿನಲ್ಲಿ ೧ ಹೊಸ ಕೋವಿಡ್-೧೯ ಪ್ರಕರಣ ಕಂಡುಬAದಿದೆ. ಆರ್‌ಟಿಪಿಸಿಆರ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ. ವೀರಾಜಪೇಟೆ ತಾಲೂಕಿನಲ್ಲಿ ೧ ಹೊಸ ಕೋವಿಡ್-೧೯ ಪ್ರಕರಣ ಕಂಡುಬAದಿದೆ. ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-೧೯ ಪ್ರಕರಣಗಳ ಸಂಖ್ಯೆ ೬೨೫೬ ಆಗಿದ್ದು, ೬೧೩೭ ಮಂದಿ ಗುಣಮುಖರಾಗಿದ್ದಾರೆ. ೩೭ ಸಕ್ರಿಯ ಪ್ರಕರಣಗಳಿದ್ದು, ೮೨ ಮರಣ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿನ ಕಂಟೈನ್‌ಮೆAಟ್ ವಲಯಗಳ ಸಂಖ್ಯೆ ೩೩ ಆಗಿದೆ ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ತಿಳಿಸಿದ್ದಾರೆ.