ಗುಡ್ಡೆಹೊಸೂರು, ಮಾ. ೧೬: ಇಲ್ಲಿಗೆ ಸಮೀಪದ ಬೆಟ್ಟಗೇರಿ ಗ್ರಾಮದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ತಾ. ೨೦ ಮತ್ತು ೨೧ ರಂದು ಭಾನುವಾರ ನಾಗಪ್ರತಿಷ್ಠಾಪನಾ ಅಂಗವಾಗಿ ವಿವಿಧ ಪೂಜೆ, ಹೋಮ ಹವನಗಳು ನೆರವೇರಲಿದೆ.
ಪೂಜಾ ಕಾರ್ಯವನ್ನು ವೇದಮೂರ್ತಿ ಬ್ರಹ್ಮಶ್ರೀ ಶಿವ ಸುಬ್ರಮಣ್ಯ ಭಟ್ ಅವರು ನಡೆಸಲಿದ್ದಾರೆ. ತಾ. ೨೦ ರಂದು ಸಂಜೆ ೫ ಗಂಟೆಯಿAದ ವಿವಿಧ ಪೂಜಾ ಕಾರ್ಯಗಳು ನಡೆಯಲಿದೆ, ತಾ. ೨೧ ರಂದು ಬೆಳಿಗ್ಗೆ ೫ ಗಂಟೆಯಿAದ ಗಣಪತಿ ಹೋಮ, ಪ್ರತಿಷ್ಠಾನ ಹವನ, ಕಲಶಾಭಿಷೇಕ ನಡೆಯಲಿದೆ. ತಾ. ೨೧ ರಂದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.