ವೀರಾಜಪೇಟೆ, ಮಾ. ೧೬: ಅಮ್ಮತ್ತಿ ಗ್ರಾಮದ ಪ್ರತಿ ಮನೆ ಮನೆಗೂ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಿ ಕೊಡಲಾಗುವುದು. ಗ್ರಾಮಸ್ಥರು ಸರಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ಅಮ್ಮತ್ತಿ ಗ್ರಾಮಕ್ಕೆ ಕುಡಿಯುವ ನೀರಿನ ಯೋಜನೆಗೆ ಭೂಮಿಪೂಜೆ ನೆರವೇರಿಸಿ ನಂತರ ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಲಿಯೇರಿ ಗ್ರಾಮದಿಂದ ಅಮ್ಮತ್ತಿ ಗ್ರಾಮಕ್ಕೆ ತೆರಳುವ ರೂ. ೨೦ ಲಕ್ಷ ಅನುದಾನದಲ್ಲಿ ನೂತನ ಕಾಂಕ್ರಿಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮಸ್ಥರ ಬಹಳ ದಿನಗಳ ಬೇಡಿಕೆಯಂತೆ ಕುಡಿಯುವ ನೀರು ಹಾಗೂ ಗ್ರಾಮೀಣ ಭಾಗದ ಅನೇಕ ರಸ್ತೆಗಳ ಕಾಮಗಾರಿ ಪೂರ್ಣಗೊಂಡಿದ್ದು ಇನ್ನು ಉಳಿದಿರುವ ರಸ್ತೆಗಳನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಲಾಗುವುದು. ತೋಟದ ಮಾಲೀಕರು ರಸ್ತೆಗೆ ಜಾಗಬಿಟ್ಟು ಸಹಕರಿಸುವಂತೆ ಬೋಪಯ್ಯ ಹೇಳಿದರು.

ರಸ್ತೆ ಉದ್ಘಾಟನೆ ಮತ್ತು ಭೂಮಿಪೂಜೆ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದರು. ಜಿ.ಪಂ. ಅಭಿಯಂತರ ಮಹಾದೇವ, ಎಂ. ಮಧು ದೇವಯ್ಯ, ಗ್ರಾಮದ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ಎನ್.ಎಸ್. ಪ್ರಶಾಂತ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೈ. ಜಾನು, ಉಪಾಧ್ಯಕ್ಷೆ ಶಾಂತ, ಸದಸ್ಯರಾದ ಸುಗುಣ, ನಾಚಪ್ಪ, ಅಶ್ವಿನಿ, ಎಂ.ಹೆಚ್. ನಿತೇಶ್, ನಿಶಾಂತ್, ಗುತ್ತಿಗೆದಾರರು ಉಪಸ್ಥಿತರಿದ್ದರು.ನೆ