*ಗೋಣಿಕೊಪ್ಪಲು, ಮಾ. ೧೬: ಅಂರ್ರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ಗೋಣಿಕೊಪ್ಪಲು ರೋಟರಿ ಕ್ಲಬ್ ವತಿಯಿಂದ ಲೋಪಮುದ್ರಾ ಆಸ್ಪತ್ರೆಗೆ ಎರಡು ಗಾಲಿ ಕುರ್ಚಿ ಹಾಗೂ ಎರಡು ವಾಕರ್ಗಳನ್ನು ಹಸ್ತಾಂತರಿಸಲಾಯಿತು.
ದಾನಿಗಳಾದ ರೀಟಾ ದೇಚಮ್ಮ ಅವರು ತಮ್ಮ ತಾಯಿ ಮಹಿಳಾ ಸಬಲೀಕರಣ ಹೋರಾಟಗಾರ್ತಿ ಮಚ್ಚಮಾಡ ಗೌರಮ್ಮ ತಿಮ್ಮಯ್ಯ ಅವರ ಜ್ಞಾಪಕಾರ್ಥವಾಗಿ ಆರೋಗ್ಯ ಕಿಟ್ಗಳನ್ನು ಇದೇ ಸಂದರ್ಭ ವಿತರಿಸಿದರು. ಈ ಸಂದರ್ಭ ಡಾ. ಅಮೃತ ನಾಣಯ್ಯ, ರೋಟರಿ ಅಧ್ಯಕ್ಷೆ ಬೀಟಾ ಲಕ್ಷಣ್, ರೋ. ರೀಟಾದೇಚಮ್ಮ, ಡಾ. ಚಂದ್ರಶೇಖರ್, ಡಾ. ಸೌಮ್ಯ ನಾಣಯ್ಯ ಉಪಸ್ಥಿತರಿದ್ದರು. ಆಸ್ಪತ್ರೆ ಸಿಬ್ಬಂದಿ ಅಕ್ಕಮ್ಮ ನಿರೂಪಿಸಿ, ರೋಟರಿ ಕಾರ್ಯದರ್ಶಿ ಮುತ್ತಪ್ಪ ವಂದಿಸಿದರು.