ಮಡಿಕೇರಿ, ಮಾ. ೧೬.: ಮಡಿಕೇರಿಯ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಂಗ ಸಂಘದ ೨೮ನೇ ವರ್ಷದ ಮಹಾಸಭೆಯು ಶ್ರೀ ಚೌಡೇಶ್ವರಿ ದೇವಾಲಯ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಎನ್. ಗಜಾನನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಂದಿನ ಸಾಲಿನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಕೆ.ಎನ್. ಗಜಾನನ, ಉಪಾಧ್ಯಕ್ಷರಾಗಿ ಕೆ.ಎನ್. ಬಾಲ್ರಾಜ್, ಕಾರ್ಯದರ್ಶಿಯಾಗಿ ಡಿ.ವಿ. ಜಗದೀಶ್, ಖಜಾಂಚಿಯಾಗಿ ಡಿ.ಎಂ. ಮಹೇಶ್, ನಿರ್ದೇಶಕರುಗಳಾಗಿ ಡಿ.ಐ. ನಾಗೇಶ್, ಡಿ.ಡಿ. ರಾಜಶೇಖರ್, ಡಿ.ಜಿ. ಕಿಶೋರ್, ಜಯಶ್ರೀ ನಾಗೇಶ್ ಗವಿ, ಭಾರತಿ ರಮೇಶ್ ಅವರು ಮುಂದುವರೆಯಲಿದ್ದಾರೆ.