ಭಾಗಮಂಡಲ, ಮಾ. ೧೬: ಸಮೀಪದ ಅಯ್ಯಂಗೇರಿಯಲ್ಲಿ ಕಾಡಾನೆ ಧಾಳಿಯಿಂದ ನೀರು ಸರಬರಾಜು ಪೈಪ್ಗಳು ಹಾನಿಗೊಳಗಾಗಿದ್ದು ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಅಯ್ಯಂಗೇರಿಯ ಬಿದ್ದಿಯಂಡ ಐನ್ಮನೆಯ ಮೇಲ್ಭಾಗದ ಹೊಳೆಯಿಂದ ಗ್ರಾಮದ ಸುಮಾರು ೩೯ ಮನೆಗಳಿಗೆ ನೈಸರ್ಗಿಕ ನೀರು ಸರಬರಾಜು ವ್ಯವಸ್ಥೆ ಕೈಗೊಳ್ಳಲಾಗಿತ್ತು. ಕಾಡಾನೆಗಳ ಹಿಂಡು ಈ ಪೈಪ್ಗಳನ್ನು ಧ್ವಂಸಗೊಳಿಸಿದ ಪರಿಣಾಮ ನೀರು ಸರಬರಾಜು ಸ್ಥಗಿತಗೊಂಡಿದೆ. ಇಂದು ಗ್ರಾಮ ಪಂಚಾಯಿತಿ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿದ್ದು ನೀರು ಸರಬರಾಜಿಗೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.