ನಾಪೋಕ್ಲು, ಮಾ. ೧೬: ಗ್ರಾಮ ಪಂಚಾಯಿತಿಯ ಮಾರುಕಟ್ಟೆಯನ್ನು ಶುಚಿತ್ವವಾಗಿಡುವ ಸಲುವಾಗಿ ಕಳೆದ ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯಲ್ಲಿ ನಿರ್ಣಯವನ್ನು ಕೈಗೊಂಡAತೆ ಈಗಾಗಲೇ ಬಿದಿರು ಮೊಳೆಯಿಂದ ಶೆಡ್ಅನ್ನು ನಿರ್ಮಿಸಿಕೊಂಡು ವ್ಯಾಪಾರ ಮಾಡುವವರು ಅವರ ಶೆಡ್ಅನ್ನು ವ್ಯಾಪಾರ ಆದ ಕೂಡಲೇ ಬಿದಿರನ್ನು ತೆಗೆದುಕೊಂಡು ಹೋಗುವಂತೆ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಈ ಬಗ್ಗೆ ಕಳೆದ ಸೋಮವಾರದ ಸಂತೆಯಲ್ಲಿ ವ್ಯಾಪಾರಿಗಳಿಗೆ ವಿಷಯವನ್ನು ಲಿಖಿತವಾಗಿ ತಿಳಿಸಿದ್ದರು. ಕೆಲವರು ಇದಕ್ಕೆ ಕಿವಿಗೊಡದ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹಮ್ಮದ್ ಖುರೇಶಿ, ಪಿ.ಡಿ.ಓ. ಚೊಂದಕ್ಕಿ ಮತ್ತು ಮಾರುಕಟ್ಟೆ ಬಿಡ್ಡುದಾರ ಕೇಲೇಟಿರ ದೀಪು ದೇವಯ್ಯ ಅವರ ಸಮ್ಮುಖದಲ್ಲಿ ಬಿದಿರಿನಿಂದ ನಿರ್ಮಿಸಿದ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಮುಂದೆ ಗ್ರಾಮ ಪಂಚಾಯಿತಿಯಿAದ ಇವರಿಗೆ ಉತ್ತಮವಾದ ಶೆಡ್ ನಿರ್ಮಿಸಿಕೊಡಲಾಗುವುದು ಎಂದು ಗ್ರಾಮ ಪಂಚಾಯಿತಿಯವರು ತಿಳಿಸಿದ್ದಾರೆ.