ಮಡಿಕೇರಿ, ಮಾ. ೧೫: ಸಂಪಾಜೆ ಗ್ರಾಮದ ಕೊಯನಾಡು ಶ್ರೀ ಮಹಾ ಗಣಪತಿ ದೇವಸ್ಥಾನ ಮತ್ತು ಶ್ರೀ ಗಣೇಶ ಯುವ ಬಳಗ ಕೊಯನಾಡು ಇವರ ಆಶ್ರಯದಲ್ಲಿ ಮಹಾಶಿವರಾತ್ರಿ ಯ ಪ್ರಯುಕ್ತ ಸ್ವಚ್ಛತಾ ಅಭಿಯಾನ ಮತ್ತು ಸನ್ಮಾನ ಕಾರ್ಯಕ್ರಮವು ಶ್ರೀದೇವರ ಸಾನಿಧ್ಯದಲ್ಲಿ ನಡೆಯಿತು.
ಉದ್ಘಾಟನೆಯನ್ನು ಶ್ರೀ ದೇವಸ್ಥಾನದ ಉಪಾಧ್ಯಕ್ಷ ಲೋಕಯ್ಯ ನಡುಬೆಟ್ಟು ನಡೆಸಿದರು, ಅತಿಥಿಗಳಾಗಿ ಪಯಸ್ವಿನಿ ಸಹಕಾರಿ ಸಂಘದ ನಿರ್ದೇಶಕ ಕಿಶನ್ ಎ.ಪಿ, ಗ್ರಾ.ಪಂ. ಸದಸ್ಯರುಗಳಾದ ಸುರೇಶ್ ಪಿ.ಎಲ್., ಪೂರ್ಣಿಮಾ ಬಾಲಕೃಷ್ಣ ಉಪಸ್ಥಿತರಿದ್ದರು. ಸಂಪಾಜೆ ಗೇಟಿನ ಬಳಿಯಿಂದ ಕೊಯನಾಡಿನವರೆಗೆ ಸಮಸ್ತ ಗ್ರಾಮಸ್ಥರ ಭಾಗವಹಿಸುವಿಕೆಯೊಂದಿಗೆ ಅಭಿಯಾನ ಯಶಸ್ವಿಯಾಯಿತು.
ಅದೇ ದಿನ ಸಂಜೆ ೭.೩೦ಕ್ಕೆ ಸರಿಯಾಗಿ ಸಭಾಕಾರ್ಯಕ್ರಮ ನಡೆಯಿತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಾಗಣಪತಿ ದೇವಸ್ಥಾನ ಅಧ್ಯಕ್ಷ ಪಿ.ಡಿ. ವಿಶ್ವನಾಥ ವಹಿಸಿದ್ದರು ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಅಧ್ಯಕ್ಷ ಉಲ್ಲಾಸ ಕೆ.ಬಿ, ಗ್ರಾ.ಪಂ. ಮಾಜಿ ನಿಕಟ ಪೂರ್ವ ಉಪಾಧ್ಯಕ್ಷ ಸುಂದರ್ ಬಿ.ಆರ್, ಗ್ರಾ.ಪಂ. ಸದಸ್ಯ ಕುಮಾರ್ ಚೆದ್ಕಾರ್, ಅಧ್ಯಕ್ಷೆ ನಿರ್ಮಲ ಭರತ್, ಸದಸ್ಯರುಗಳಾದ ರಮಾದೇವಿ ಬಾಲಚಂದ್ರ ಕಳಗಿ, ನವೀನ್ ಕುಮಾರ್. ಬಿ.ಎಂ, ಜಗದೀಶ್ ಪರ್ಮಲೆ, ಯುವ ಬಳಗ ಕೊಯನಾಡು ಅಧ್ಯಕ್ಷ ಚಿದಾನಂದ ಹಂಡನ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕೋವಿಡ್-೧೯ರ ಸಂದರ್ಭದಲ್ಲಿ ನಿಸ್ವಾರ್ಥವಾಗಿ ದುಡಿದ ಗ್ರಾಮದ ಆಶಾ ಕಾರ್ಯಕರ್ತೆಯರಾದ ಲೀಲಾವತಿ ದೇವಪ್ಪ, ಸಾವಿತ್ರಿ ಕೊರಗಪ್ಪ, ಗಿರಿಜಾ ಮೋಹನ್ ಅವರುಗಳನ್ನು ಸನ್ಮಾನಿಸಲಾಯಿತು. ಯಶೋಧರ. ಬಿ.ಜೆ ಸ್ವಾಗತಿಸಿ, ವಂದಿಸಿ ಕಾರ್ಯಕ್ರವನ್ನು ನಿರೂಪಿಸಿದರು. ನಂತರ ಪಂಚಾನನ ಭಜನಾ ತಂಡ, ಶ್ರೀ ಚಾಮುಂಡೇಶ್ವರಿ ಭಜನಾ ತಂಡ ದೇವರಕೊಲ್ಲಿ, ಶ್ರೀ ಮಹಾಗಣಪತಿ ಭಜನಾ ತಂಡ ಕೊಯನಾಡು ಇವರಿಂದ ಭಜನೆ ನಡೆಯಿತು.