ವೀರಾಜಪೇಟೆ, ಮಾ. ೧೫: ಕಾಫಿ ತೋಟದಲ್ಲಿ ಕರಿಮೆಣಸನ್ನು ಕುಯ್ಯಲು ಮರದಿಂದ ಮರಕ್ಕೆ ಕಬ್ಬಿಣದ ಏಣಿಯನ್ನು ಸಾಗಿಸುತ್ತಿದ್ದಾಗ ಏಣಿಗೆ ಹೈಟೆನ್ಷ್ನ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಸ್ಪರ್ಶಗೊಂಡು ಕಾರ್ಮಿಕ ಸಬಾಸ್ಟೀನ್ (೬೦) ಎಂಬಾತನು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ವೀರಾಜಪೇಟೆಯ ಆರ್ಜಿ ಗ್ರಾಮದಲ್ಲಿರುವ ಖಾಸಗಿ ವಿದ್ಯಾಸಂಸ್ಥೆಗೆ ಸೇರಿದ ಕಾಫಿ ತೋಟದಲ್ಲಿ ಸಂಭವಿಸಿದೆ. ಪೊಲೀಸರು ಮೃತದೇಹವನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಮೃತದೇಹವನ್ನು ವಾರಿಸುದಾರರಿಗೆ ನೀಡಿದ್ದಾರೆ, ಈ ಸಂಬAಧ ಪತ್ನಿ ಸಿಸಿಲಿಯಾ ಲೋಬೊ ದೂರು ನೀಡಿದ್ದು, ವೀರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.