ಶನಿವಾರಸಂತೆ, ಮಾ. ೧೫: ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿಗೆ ಸೇರಿದ ಗೋಪಾಲಪುರದ ಚರ್ಚ್ನಲ್ಲಿ ಕ್ರೆöÊಸ್ತ ಬಾಂಧವರು ಮುಂದಿನ ಗುಡ್ ಫ್ರೆöÊಡೆ ಮತ್ತು ಈಸ್ಟರ್ ಹಬ್ಬದ ಪ್ರಯುಕ್ತ ೧೪ ಶಿಲುಬೆಯ ಪ್ರಾರ್ಥನಾ ಸ್ಥಳ ಮತ್ತು ಸ್ಮಶಾನದಲ್ಲಿ ಶುಚಿತ್ವ ಕಾರ್ಯ ನಡೆಸಿದರು.
ಈ ಸಂದರ್ಭ ಗೋಪಾಲಪುರ ಚರ್ಚ್ನ ಫಾದರ್ ಜಾಕಬ್ ಕೊಳನೂರು, ಬಾಲ ಯೇಸು ಬಿಸಿಸಿ ತಂಡ ಬೀಟಿಕಟ್ಟೆ, ಪವಿತ್ರ ಹೃದಯ ಬಿಸಿಸಿ ತಂಡ ಕಳಲೆ ಹೊಸೂರು, ಸಂತ ಅಂತೋಣಿ ಬಿಸಿಸಿ ತಂಡ ಗೋಪಾಲಪುರ, ಸಂತ ಅಲ್ಫೋನ್ಸ್ ಬಿಸಿಸಿ ತಂಡ ಶನಿವಾರಸಂತೆ ಇವರೆಲ್ಲರೂ ಸೇರಿ ಸ್ವಚ್ಛತಾ ಕಾರ್ಯ ಮಾಡಿದರು.
ಈ ಸಂದರ್ಭದಲ್ಲಿ ಫಾದರ್ ಜಾಕಬ್ ಕೊಳನೂರು ಮಾತನಾಡಿ, ಗುಡ್ ಫ್ರೆöÊಡೆ ಸಂದರ್ಭದಲ್ಲಿ ಸುಮಾರು ೫೦ ವರ್ಷದಿಂದಲೂ ಈ ಸ್ಥಳದಲ್ಲಿ ೧೪ ಶಿಲುಬೆಯ ಪ್ರಾರ್ಥನಾ ಸ್ಥಳದಲ್ಲಿ ಶಿಲುಬೆಯಾತನೆಯ ಪ್ರಾರ್ಥನೆಯನ್ನು ಮಾಡುತ್ತಾ ಬಂದಿರುತ್ತೇವೆ. ಈ ವರ್ಷವೂ ಗುಡ್ ಫ್ರೆöÊಡೆಯಂದು ೧೪ ಶಿಲುಬೆಯ ಪ್ರಾರ್ಥನೆಯನ್ನು ನಡೆಸಲಾಗುವುದು. ಹಾಗಾಗಿ ಈ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಗಿದೆ ಎಂದು ಹೇಳಿದರು.