ಮಡಿಕೇರಿ, ಮಾ. ೧೫: ಪ್ರಸ್ತುತ ರಾಜಕಾರಣದಲ್ಲಿ ಜಾತಿ, ಜನಾಂಗ ಮತ್ತು ಧರ್ಮಗಳಂತಹ ಅಂಶಗಳನ್ನು ಹೆಚ್ಚಾಗಿ ಕೇಂದ್ರಿಕರಿಸಿ ಮಾನವೀಯ ಮೌಲ್ಯಗಳನ್ನು ನಿರ್ಲಕ್ಷಿಸುತ್ತಿರುವ ಅನೇಕ ಘಟನೆಗಳನ್ನ ನಾವು ದಿನನಿತ್ಯ ಪತ್ರಿಕಾ, ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ವಿದ್ಯಾರ್ಥಿಗಳು ಮಾನವೀಯ ಮೌಲ್ಯವುಳ್ಳ ರಾಜಕಾರಣಿಗಳಾಗ ಬೇಕೆಂದು ಬಾಳೆಲೆ ವಿಜಯಲಕ್ಷಿö್ಮ ಪದವಿಪೂರ್ವ ಕಾಲೇಜಿನ ನಿವೃತ್ತ ರಾಜ್ಯಶಾಸ್ತç ಉಪನ್ಯಾಸಕ ಅಶ್ವಿನ್‌ಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವೀರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ, ಭರವಸಾ ಕೋಶ ಹಾಗೂ ರಾಜ್ಯಶಾಸ್ತç ವಿಭಾಗದ ಸಂಯುಕ್ತ ಆಶ್ರಯದಲ್ಲಿ ,ರಾಜ್ಯಶಾಸ್ತç ವಿಭಾಗದ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳ ಸೃಜನಶೀಲ ಬರವಣಿಗೆಗಳ ನ್ನೊಳಗೊಂಡ "ರಾಜ್ಯಶಾಸ್ತç ಬೆಳಕು" ಭಿತ್ತಿಪತ್ರಿಕೆಯ ವಾರ್ಷಿಕೋತ್ಸವದ ಮುಖ್ಯ ಅತಿಥಿಗಳಾಗಿ ಆಗಮಿಸಿ ಅಶ್ವಿನ್‌ಕುಮಾರ್ ಅವರು ಮಾತನಾಡಿದರು. ಮಹಾತ್ಮಾ ಗಾಂಧಿ ಯವರ ಸತ್ಯ, ಅಹಿಂಸೆಯAತಹ ಆದರ್ಶಗಳು, ಬುದ್ಧ, ಬಸವಣ್ಣರಂತಹ ಮಹಾನ್ ಮಾನವತಾವಾದಿಗಳ ಚಿಂತನೆಗಳ ರಾಜಕಾರಣಿಗಳಿಗೆ ದಾರಿದೀಪವಾಗಬೇಕಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ವೀರಾಜಪೇಟೆ ಡಿ.ವೈ.ಎಸ್.ಪಿ. ಜಯಕುಮಾರ್, ಯುವ ಜನತೆಯು ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳ ಬೇಕಾಗಿದೆ.

ಸ್ತಿçà - ಪುರುಷ ಸಮಾನ ಚಿಂತನೆಗಳಿAದ ಮಾತ್ರವೇ ರಾಜಕಾರಣದಲ್ಲಿ ಮಾನವೀಯತೆ ಯನ್ನು ಸ್ಥಾಪಿಸಲು ಸಾಧ್ಯ ಎಂದು ವೀರಾಜಪೇಟೆ ಡಿ.ವೈ.ಎಸ್.ಪಿ. ಜಯಕುಮಾರ್ ಹೇಳಿದರು. ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕಿ ಎಂ.ಬಿ ದಿವ್ಯ ಮಾತನಾಡಿ, ರಾಜ್ಯಶಾಸ್ತç ವಿಭಾಗದ ಸಹಯೋಗದಲ್ಲಿ ನಡೆಸುತ್ತಿರುವ ಚುನಾವಣಾ ಸಾಕ್ಷರತಾ ಸಮಿತಿ, ಮಾನವ ಹಕ್ಕುಗಳ ಸಮಿತಿ, ಸಂವಿಧಾನ ಜಾಗೃತಿ ಸಮಿತಿ, ರಾಜ್ಯಶಾಸ್ತçದ ವಿದ್ಯಾರ್ಥಿ ಸಂಘದ ಶೈಕ್ಷಣಿಕ ಕಾರ್ಯಚಟುವಟಿಕೆಗಳ ರೂಪುರೇಷೆಗಳ ಬಗ್ಗೆ ವಿವರಿಸಿದರು.

ವಿದ್ಯಾರ್ಥಿಗಳ ಸೃಜನಶೀಲ ಬರವಣಿಗೆಗಳನ್ನೊಳಗೊಂಡ "ರಾಜ್ಯಶಾಸ್ತçದ ಬೆಳಕು" ಭಿತ್ತಿಪತ್ರಿಕೆ ಯನ್ನು ಅತಿಥಿಗಳು ಅನಾವರಣ ಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ವಹಿಸಿದ್ದರು. ರಾಜ್ಯಶಾಸ್ತç ವಿಭಾಗದ ಉಪನ್ಯಾಸಕ ಹೆಚ್.ಬಿ. ವೇಣು ಗೋಪಾಲ್ ರಾಜ್ಯಶಾಸ್ತç ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಿಗೆ ಪ್ರಮಾಣ ವಚನವನ್ನು ಭೋದಿಸಿದರು.

ಕಳೆದ ಶೈಕ್ಷಣಿಕ ವರ್ಷದಲ್ಲಿ ರಾಜ್ಯಶಾಸ್ತç ವಿಭಾಗದಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ರಾಜ್ಯಶಾಸ್ತçದ ವಿಭಾಗದ ಉಪನ್ಯಾಸಕ ವನಿತ್‌ಕುಮಾರ್, ಉಪನ್ಯಾಸಕಿ ಡೀನಾ ಪಿ.ಪಿ., ಇತಿಹಾಸ ವಿಭಾಗದ ಮುಖ್ಯಸ್ಥ ರುದ್ರ ಇದ್ದರು.

ಕಾರ್ಯಕ್ರಮವನ್ನು ರಾಜ್ಯಶಾಸ್ತç ಉಪನ್ಯಾಸಕ ವೇಣುಗೋಪಾಲ್ ಸ್ವಾಗತಿಸಿ, ವಿದ್ಯಾರ್ಥಿಯಾದ ಬೇಬಿ ವಂದಿಸಿದರು.

- ಕೆ.ಎಂ. ಇಸ್ಮಾಯಿಲ್ ಕಂಡಕರೆ