ಮಡಿಕೇರಿ, ಮಾ. ೧೫: ತಾಳತ್ತಮನೆ ನೇತಾಜಿ ಯುವತಿ ಮಂಡಲ ವತಿಯಿಂದ ಸಂಘದ ಸಭಾಂಗಣದಲ್ಲಿ ನಡೆದ ಮಹಿಳಾ ದಿನಾಚರಣೆಯನ್ನು ಮದೆ ಗ್ರಾಮ ಪಂಚಾಯ್ತಿ ಸದಸ್ಯ ಪಿ.ಕೆ. ಜೀವನ್ ಉದ್ಘಾಟಿಸಿದರು.
ದಿನಾಚರಣೆ ಅಂಗವಾಗಿ ಹಿರಿಯ ಸಾಹಿತಿ ಕೊಡಗಿನ ಗೌರಮ್ಮ ಅವರ ಕುರಿತು ಬಿ.ಜೆ. ಚೈತ್ರ ಗುರುಭಟ್ ವಿಷಯ ಮಂಡಿಸಿದರು. ಮಹಿಳೆಯರಿಗೆ ಆಯೋಜಿಸಿದ್ದ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಈ ಸಂದರ್ಭ ಬಹುಮಾನ ವಿತರಿಸಲಾಯಿತು.
ಮದೆ ಗ್ರಾ.ಪಂ ಸದಸ್ಯೆ ನವೀನ ಬಿ.ಎಸ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಭಾಗವಹಿಸಿದ್ದರು.