ಮಡಿಕೇರಿ, ಮಾ.೧೫: ಮಂಗಳೂರು ವಿಶ್ವ ವಿದ್ಯಾನಿಲಯ ವತಿಯಿಂದ ಸೋಮವಾರಪೇಟೆ ತಾಲೂಕಿನ ಚಿಕ್ಕ ಅಳುವಾರ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ತಾ ೧೬ ರಂದು (ಇಂದು) ಬೆಳಗ್ಗೆ ೧೦.೩೦ ಗಂಟೆಗೆ ವಿಶ್ವ ಸಮಾಜ ಕಾರ್ಯ ದಿನಾಚರಣೆ ನಡೆಯಲಿದೆ. ಚಿಕ್ಕ ಅಳುವಾರ ಜ್ಞಾನ ಕಾವೇರಿಯ ನಿರ್ದೇಶಕರಾದ ಪ್ರೊ.ಕೆ.ಎಸ್.ಚಂದ್ರಶೇಖರಯ್ಯ, ಸುಂಟಿಕೊಪ್ಪ ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ, ಆಲೂರು ಸಿದ್ದಾಪುರ ಆಸ್ಪತ್ರೆಯ ಡಾ.ಸುಪರ್ಣ, ಗೌರಿ ಪ್ರಕಾಶ್, ಇತರರು ಪಾಲ್ಗೊಳ್ಳಲಿದ್ದಾರೆ.