ಮಡಿಕೇರಿ, ಮಾ. ೧೫: ಕರಟವಾದಕ, ಜಾನಪದ ಕಲಾವಿದ ಬೆಸೂರು ಶಾಂತೇಶ್ ಅವರು ಪ್ರತಿಷ್ಠಿತ ಜಾನಪದ ಲೋಕೋತ್ಸವ ಪ್ರಶಸ್ತಿ ಸ್ವೀಕರಿಸಿದರು.

ತಾ. ೧೩ ರಂದು ರಾಮನಗರ ಜಾನಪದ ಲೋಕದಲ್ಲಿ ನಡೆದ ಸಮಾರಂಭದಲ್ಲಿ ಡಾ. ನಿರ್ಮಲಾನಂದ ಮಹಾಸ್ವಾಮಿಗಳು, ರಾಜ್ಯ ಜಾನಪದ ಪರಿಷತ್ ಅಧ್ಯಕ್ಷ ತಿಮ್ಮೇಗೌಡ ಮತ್ತು ಅತಿಥಿಗಳು ಪ್ರಶಸ್ತಿ ವಿತರಿಸಿದರು.

ಶಾಂತೇಸ್ ಅವರ ಹೆಸರನ್ನು ಕೊಡಗು ಜಿಲ್ಲಾ ಜಾನಪದ ಪರಿಷತ್ ಘಟಕ ಶಿಫಾರಸು ಮಾಡಿತ್ತು. ಸಮಾರಂಭದಲ್ಲಿ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ರುಬೀನ ಮತ್ತು ಇತರರು ಪಾಲ್ಗೊಂಡಿದ್ದರು.