ಮಡಿಕೇರಿ, ಮಾ. ೧೫: ಶಾಲಾ ಶಿಕ್ಷಣ ಸಚಿವಾಲಯ ಮತ್ತು ಸಾಕ್ಷರತಾ ವಿಭಾಗ ನವದೆಹಲಿ ಅವರು ಪ್ರಸ್ತುತ ಸಾಲಿನಲ್ಲಿ ಕೋವಿಡ್-೧೯ರ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ‘ಪರೀಕ್ಷಾ ಪೇ ಚರ್ಚಾ-೨೦೨೧’ರ ೪ನೇ ಆವೃತ್ತಿಯನ್ನು ಆನ್ಲೈನ್ ಮೂಲಕ ತಾ. ೨೦ ರಂದು ನಡೆಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ೧೫೦೦ ವಿದ್ಯಾರ್ಥಿಗಳು, ೨೫೦ ಶಿಕ್ಷಕರು ಹಾಗೂ ೨೫೦ ಪೋಷಕರೊಂದಿಗೆ ನೇರವಾಗಿ ಸಂವಹನ ನಡೆಸಲಿದ್ದಾರೆ.
ಕಾರ್ಯಕ್ರಮಕ್ಕೆ ಸರ್ಕಾರಿ ಅನುದಾನಿತ ಹಾಗೂ ಅನುದಾನರಹಿತ ಶಾಲಾ ಕಾಲೇಜುಗಳಲ್ಲಿ ೯ ರಿಂದ ೧೨ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಆನ್ಲೈನ್ ಮೂಲಕ hಣಣಠಿs://mಥಿgov. ಪರೀಕ್ಷಾ ಪೇ ಚರ್ಚಾ-೨೦೨೧ ವೆಬ್ಸೈಟ್ಗೆ ನೋಂದಣಿ ಮಾಡಿಕೊಳ್ಳಬಹುದು. ೯ ರಿಂದ ೧೨ನೇ ತರಗತಿಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ, ಮಡಿಕೇರಿ ಕೊಡಗು ಜಿಲ್ಲೆ ಇವರನ್ನು ಸಂಪರ್ಕಿಸಲು ಸರ್ವ ಶಿಕ್ಷಣ ಅಭಿಯಾನ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಪಿ.ಎಸ್. ಮಚ್ಚಾಡೊ ಅವರು ತಿಳಿಸಿದ್ದಾರೆ. ೯೪೪೮೯೯೯೩೪೪, ೯೪೪೮೯೯೯೪೦೦, ಪರೀಕ್ಷಾ ಪೇ ಚರ್ಚಾ ವೆಬ್ ಲಿಂಕ್ ; hಣಣಠಿs://iಟಿಟಿovಚಿಣeiಟಿಜiಚಿ.mಥಿgov.iಟಿ ಮತ್ತು hಣಣಠಿs://mಥಿgov ಗಮನಿಸಬಹುದಾಗಿದೆ.