ಮಡಿಕೇರಿ, ಮಾ. ೧೫: ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ೨೦೨೦-೨೧ನೇ ಸಾಲಿನ ೨ನೇ ಹಂತದ ಗ್ರಾಮಸಭೆ ತಾ. ೧೭ ರಂದು (ನಾಳೆ) ಬೆಳಿಗ್ಗೆ ೧೧ ಗಂಟೆಗೆ ಗ್ರಾಮ ಪಂಚಾಯಿತಿ ಸಭಾಂಗಣ(ಈಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಸಹಕಾರ ಸಂಘಗಳ ಕಟ್ಟಡದ ಹತ್ತಿರ)ದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಎಸ್. ನೇತ್ರಾವತಿ ಅಧ್ಯಕ್ಷತೆಯಲ್ಲಿ ಹಾಗೂ ನೋಡಲ್ ಅಧಿಕಾರಿ ಡೀನಾ ಕುಶಾಲಪ್ಪ-ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಪೊನ್ನಂಪೇಟೆ ಇವರ ಸಮ್ಮುಖದಲ್ಲಿ ನಡೆಯಲಿದೆ.