ಮಡಿಕೇರಿ, ಮಾ. ೧೫: ಕೊಡಗು ಜಿಲ್ಲಾ ಪಿಗ್ಮಿ ಸಂಗ್ರಹಗಾರರ ಸಂಘದ ಹನ್ನೊಂದನೇ ಮಹಾಸಭೆ ನಗರದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಎಂ.ಡಿ. ನಾಣಯ್ಯ ಅಧ್ಯಕ್ಷತೆಯಲ್ಲಿ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸದಸ್ಯರುಗಳ ಹಿತವನ್ನು ಕಾಯುವ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸದಸ್ಯರುಗಳು ಸಂಘದ ಬಲವರ್ಧನೆಗಾಗಿ ಕೈಜೋಡಿಸಬೇಕು, ತಮ್ಮ ವೃತ್ತಿ ಜೀವನಕ್ಕೆ ಯಾವುದೇ ಅಡ್ಡಿ, ಆತಂಕಗಳು ಎದುರಾದರು ಒಗ್ಗಟ್ಟಿನಿಂದ ಕಾನೂನಿನ ಚೌಕಟ್ಟಿನಡಿ ಹೋರಾಟ ನಡೆಸಲು ಸಿದ್ಧರಿರಬೇಕೆಂದು ನಾಣಯ್ಯ ಕರೆ ನೀಡಿದರು.

ಪಿಗ್ಮಿ ಸಂಗ್ರಹಗಾರರು ಗ್ರಾಹಕರಿಗೆ ನೋವಾಗದ ರೀತಿಯಲ್ಲಿ ನಡೆದುಕೊಳ್ಳಬೇಕು. ನಿಯಮಗಳನ್ನು ಉಲ್ಲಂಘಿಸದೆ ನ್ಯಾಯಯುತವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಸಂಘಕ್ಕೆ ಉತ್ತಮ ಹೆಸರನ್ನು ತಂದುಕೊಡಬೇಕೆAದು ಮನವಿ ಮಾಡಿದರು.

ಸಂಕಷ್ಟದಲ್ಲಿರುವ ಸದಸ್ಯರ ಕುಟುಂಬಗಳಿಗೆ ನೆರವಾಗಲು ಎಲ್ಲರೂ ಸಹಕಾರ ನೀಡಬೇಕು. ಯಾವುದೇ ಸಮಸ್ಯೆಗಳು ಎದುರಾದರು ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ನ್ಯಾಯಯುತ ನಿರ್ಧಾರವನ್ನು ಕೈಗೊಳ್ಳಬೇಕೆಂದು ನಾಣಯ್ಯ ಸಲಹೆ ನೀಡಿದರು.

ಸಂಘದ ಉಪಾಧ್ಯಕ್ಷ ಯು.ಇ. ಚಂದ್ರಶೇಖರ್, ಕಾರ್ಯದರ್ಶಿ ಪಿ.ಎ. ಮಂಜುನಾಥ್, ಸಹ ಕಾರ್ಯದರ್ಶಿಗಳಾದ ವಿಜಯಲಕ್ಷಿö್ಮ, ಎಂ.ಆರ್. ಜಯಪ್ರಕಾಶ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.