ಮಡಿಕೇರಿ, ಮಾ. ೧೨: ವಿವೇಕಾನಂದ ಕಾಲೇಜು ಕುಶಾಲನಗರ ಇಲ್ಲಿ ಆಯೋಜಿಸಲಾದ ಐಟಿ ಮತ್ತು ಕಾಮರ್ಸ್ ಫೆಸ್ಟ್ನಲ್ಲಿ ಮೂರ್ನಾಡು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇವರಲ್ಲಿ ಸೋಮಯ್ಯ ಪಿ.ಸಿ. ಹಾಗೂ ಅರ್ಜುನ್ ದೇವೇಂದ್ರನಾಯಕ್ ಐಟಿ ರಸಪ್ರಶ್ನೆಯಲ್ಲಿ ಪ್ರಥಮ, ಬಾಂರ‍್ಸ್ ಎರೆನ ಸ್ಪರ್ಧೆಯಲ್ಲಿ ಫಾಹದ್ ಹಾಗೂ ರಾಹುಲ್ ಗಣಪತಿ ಪ್ರಥಮ, ಕೋಡಿಂಗ್ ಸ್ಪರ್ಧೆಯಲ್ಲಿ ನಿಶ್ಮಿತ ಎಂ.ವಿ. ಹಾಗೂ ಸ್ನೇಹ ದ್ವಿತೀಯ ಸ್ಥಾನಗಳಿಸಿರುತ್ತಾರೆಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.