ಕುಶಾಲನಗರ, ಮಾ. ೧೨ : ಕಾವೇರಿ ಯುವಕ ಸಂಘದ ಆಶ್ರಯದಲ್ಲಿ ಜಿಎಂಪಿ ಶಾಲೆಯಲ್ಲಿ ಹಮ್ಮಿಕೊಂಡಿರುವ ೧೦ನೇ ವರ್ಷದ ಕಾವೇರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.
ಪಂದ್ಯಾಟವನ್ನು ಮುಳ್ಳುಸೋಗೆ ಗ್ರಾ.ಪಂ. ಸದಸ್ಯ ಹಾಗೂ ಕಾವೇರಿ ಯುವಕ ಸಂಘದ ಗೌರವಾಧ್ಯಕ್ಷ ಮುರಳೀಧರ್ ಚಾಲನೆ ನೀಡಿದರು. ಬಿಜೆಪಿ ನಗರಾಧ್ಯಕ್ಷ ಉಮಾಶಂಕರ್ ಹಾಗೂ ಜಿಪಂ ಮಾಜಿ ಅಧ್ಯಕ್ಷ ವಿ.ಎಂ.ವಿಜಯ ಪಂದ್ಯಾಟವನ್ನು ಉದ್ಘಾಟಿಸಿದರು.
ಪಂದ್ಯಾಟದಲ್ಲಿ ಒಟ್ಟು ೧೬ ತಂಡಗಳು ಭಾಗವಹಿಸಿದ್ದು ಕೊಡಗು ಪೊಲೀಸ್ ಮತ್ತು ಕೊಡಗು ಮೀಡಿಯ ತಂಡದ ನಡುವೆ ಪ್ರದರ್ಶನಪಂದ್ಯಾಟ ನಡೆಯಿತು. ಪಂದ್ಯಾಟದಲ್ಲಿ ಕೊಡಗು ಮೀಡಿಯ ತಂಡ ಜಯಗಳಿಸಿತು.
ಈ ಸಂದರ್ಭ ಕುಶಾಲನಗರ ಪ.ಪಂ. ಅಧ್ಯಕ್ಷ ಜೈವರ್ಧನ್, ಸದಸ್ಯರಾದ ಅಮೃತ್ರಾಜ್, ವಿ.ಎಸ್.ಆನಂದಕುಮಾರ್, ಸಂಚಾರಿ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್, ಕೊಡಗು ಪ್ರೆಸ್ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಯುವಕ ಸಂಘದ ಅಧ್ಯಕ್ಷ ಅನೀಶ್, ಪದಾಧಿಕಾರಿಗಳಾದ ಪ್ರದೀಪ್, ಪೆಮ್ಮಯ್ಯ, ಶಿವಸ್ವಾಮಿ ಮತ್ತಿತರರು ಇದ್ದರು.