
ಮಡಿಕೇರಿ, ಮಾ. ೧೩: ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯಲ್ಲಿ ಹಿಂದಿನಿAದಲೂ ವನ್ಯಪ್ರಾಣಿಗಳ ಉಪಟಳ ಒಂದು ರೀತಿಯಲ್ಲಿ ಸಹಜವೇ ಆಗಿದ್ದು ಜನತೆಯೂ ಇದಕ್ಕೆ ಹೊಂದಿಕೊAಡು ಸಮಸ್ಯೆಗಳ ನಡುವೆಯೂ ತಮ್ಮ ಬದುಕನ್ನು ನಿಭಾಯಿಸಿಕೊಂಡು ಬರುತ್ತಿದ್ದರು. ಆದರೆ ಇದೀಗ ದಿಢೀರನೆ ಕೆಲವು ತಿಂಗಳುಗಳಿAದ ಉದ್ಭವಿಸಿರುವ ಪರಿಸ್ಥಿತಿ ದಕ್ಷಿಣ ಕೊಡಗಿನಲ್ಲಿ ಎಲ್ಲಾ ರೀತಿಯ ಜನ ಜೀವನದ ಮೇಲೆ ಭಾರೀ ಪ್ರಹಾರ ನೀಡಿದ್ದು, ಈಗಿನ ಚಿತ್ರಣ ಅಲ್ಲೋಲ ಕಲ್ಲೋಲವಾಗುತ್ತಿದೆ.ಪ್ರಸ್ತುತ ಎಲ್ಲಾ ದಿನಗಳು ಭಯಾನಕವಾಗುತ್ತಿದ್ದು, ಸಾರ್ವಜನಿಕರು, ರೈತಾಪಿ ವರ್ಗದವರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಕಾರ್ಮಿಕರು, ಶಿಕ್ಷಕರು, ಉದ್ಯೋಗಿಗಳು, ಉದ್ಯಮಿಗಳು ಈ ರೀತಿಯಾಗಿ ಬಹುತೇಕ ಎಲ್ಲರೂ ಭೀತಿಯ ನೆರಳಿನಲ್ಲಿ ಪ್ರತಿಕ್ಷಣವನ್ನು ಕಳೆಯುವಂತಾಗಿದೆ. ಈ ಹಿಂದೆAದೂ ಕಂಡು-ಕೇಳರಿಯದಷ್ಟು ಮಾದರಿಯಲ್ಲಿ ಜನತೆ ಹಾಗೂ ಜಾನುವಾರುಗಳ ಮೇಲೆ ಲಗ್ಗೆಯಿಡುತ್ತಿರುವ ವ್ಯಾಘ್ರನ ಹಾವಳಿ ಒಂದೆಡೆಯಾದರೆ, ಕಾಡಾನೆಗಳು, ಕಾಡೆಮ್ಮೆಗಳು, ಕರಡಿಯಂತಹ ಪ್ರಾಣಿಗಳ ಅಟ್ಟಹಾಸದಿಂದ ಕೃಷಿಯನ್ನೇ ಅವಲಂಭಿತವಾಗಿರುವ ಜನತೆಯ ಬದುಕೇ ಅತಂತ್ರವಾಗುತ್ತಿದೆ.ಕುಟ್ಟ ಗ್ರಾ.ಪಂ., ಶ್ರೀಮಂಗಲ, ಟಿ. ಶೆಟ್ಟಿಗೇರಿ, ಬಿರುನಾಣಿ, ನಾಲ್ಕೇರಿ, ಹುದಿಕೇರಿ ಗ್ರಾ. ಪಂ. ವ್ಯಾಪ್ತಿಯ ಬಹುತೇಕ ಎಲ್ಲಾ ಗ್ರಾಮಗಳಲ್ಲೂ ಪ್ರಸ್ತುತ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಕೆಲವೇ ದಿನಗಳ ಅಂತರದಲ್ಲಿ ಮೂವರು ಅಮಾಯಕ ವ್ಯಕ್ತಿಗಳ ಬಲಿ, ಓರ್ವರು ಬಹುತೇಕ ಗಂಭೀರ ಸ್ಥಿತಿಯಲ್ಲಿ ಗಾಯಗೊಂಡಿರುವದು, ದಿನಕ್ಕೆ ಎರಡು-ಮೂರರಂತೆ ಪ್ರತಿನಿತ್ಯ ಬಲಿಯಾಗುತ್ತಿರುವ ಮೆಚ್ಚಿನ ಜಾನುವಾರುಗಳು ಕೇವಲ ರಾತ್ರಿ ವೇಳೆಯಲ್ಲಿ ಮಾತ್ರವಲ್ಲ ಹಾಡಹಗಲೇ ಅಟ್ಟಹಾಸ ತೋರುತ್ತಿರುವ ಹುಲಿಗಳಿಂದಾಗಿ ಮುಂದೇನು ಎಂಬ ಪ್ರಶ್ನೆ ತೀವ್ರವಾಗಿ ಕಾಡಲಾರಂಭಿಸಿದೆ. ದಿನಕ್ಕೊಂದು ಕಡೆಯಂತೆ ಹುಲಿಗಳು ಪ್ರತ್ಯಕ್ಷವಾಗುತ್ತಿರುವುದು ಜನತೆಯನ್ನು ಇನ್ನೂ ಕಂಗೆಡಿಸುವAತೆ ಮಾಡಿದ್ದು ಜನರ ಆಕ್ರೋಶವೂ ಹೆಚ್ಚಾಗುತ್ತಿದೆ.
ಕೆಲಸ ಕಾರ್ಯಗಳ ಸ್ಥಗಿತ: ಇದೀಗ ಕಾಫಿ, ಕರಿಮೆಣಸು ಕುಯಿಲು ಸೇರಿದಂತೆ ಇವುಗಳ ನಿರ್ವಹಣೆಯ ಪರ್ವಕಾಲವೂ ಇದಾಗಿದೆ. ಆದರೆ ರೈತರು-ಬೆಳೆಗಾರರಿಗೆ ತೋಟಗಳಿಗೆ ಹೋಗಲಾಗುತ್ತಿಲ್ಲ. ಫಸಲನ್ನು ಮನೆಗೆ ಸಾಗಿಸುವದು, ನೀರು ಹಾಯಿಸುವದೂ ಮತ್ತಿತರ ಕೆಲಸಗಳೂ ದುಸ್ತರವಾಗುತ್ತಿದೆ. ಕಾರ್ಮಿಕರೂ ಕೆಲಸಕ್ಕೆ ತೆರಳಲು ಹಿಂಜರಿಯುತ್ತಿದ್ದಾರೆ. ಮನೆಯಲ್ಲೇ ಇರುವ ಖಾಯಂ ಕಾರ್ಮಿಕರಿಗೂ ಮಾಲೀಕರು ಅವರ ಬದುಕಿಗೆ ಸಹಕಾರ ನೀಡಬೇಕಾಗಿದೆ. ಸುತ್ತಮುತ್ತಲ ಶಾಲೆಗಳು, ಕಾಲೇಜುಗಳಿಗೆ ವಿದ್ಯಾರ್ಥಿಗಳು, ಶಿಕ್ಷಕರು ತೆರಳಲೂ ಭಯ ಪಡುವಂತಾಗಿದ್ದು, ಹಲವು ಶಾಲೆಗಳಿಗೆ ವಿದ್ಯಾರ್ಥಿಗಳು ತೆರಳುತ್ತಲೇ ಇಲ್ಲ.
(ಮೊದಲ ಪುಟದಿಂದ) ಇನ್ನು ಕೆಲವೆಡೆ ಪೋಷಕರೇ ಮಕ್ಕಳನ್ನು ಕರೆತರುವದು, ಕರೆದೊಯ್ಯುವ ಕೆಲಸ ಮಾಡುವಂತಾಗಿದೆ. ವ್ಯಾಪಾರ-ವಹಿವಾಟಿನ ಮೇಲೂ ಈ ಭಯಾನಕತೆಯ ಸನ್ನಿವೇಶ ಪರಿಣಾಮಬೀರುತ್ತಿದ್ದು ವ್ಯಾಪಾರಸ್ಥರ ಬದುಕೂ ಕ್ಲಿಷ್ಟಕರವಾಗುತ್ತಿದೆ. ಇದೀಗ ವಿವಿಧ ಗ್ರಾಮಗಳಲ್ಲಿ ದೇವರ ಉತ್ಸವಗಳೂ ಜರುಗುವ ಸಮಯವಾಗಿದ್ದು, ಪೂಜಾ ಕೈಂಕರ್ಯಗಳಿಗೆ ತೆರಳಲೂ ಭಯಪಡುವಂತಾಗಿದೆ.
ಪ್ರಯೋಜನ ಕಾಣದ ಕಾರ್ಯಾಚರಣೆ: ಹುಲಿ ಸೆರೆಗೆ ಎಂಬAತೆ ಅರಣ್ಯ ಇಲಾಖೆ ಭಾರೀ ಕಾರ್ಯಾಚರಣೆ ನಡೆಸುತ್ತಿದ್ದರೂ, ಇದು ಪ್ರಯೋಜನ ಕಾಣುತ್ತಿಲ್ಲ. ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಾಕಾನೆಗಳನ್ನು ಬಳಸುತ್ತಿದ್ದು, ತೋಟಗಳ ನಡುವೆ ಆನೆಗಳು ತಿರುಗಾಡುವದರಿಂದ ಹಲವರ ತೋಟಗಳೂ ಹಾನಿಗೀಡಾಗುತ್ತಿವೆ ಎಂಬ ಅಸಹಾಯಕತೆಯನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಆಕ್ಷೇಪ ವ್ಯಕ್ತಗೊಂಡು ಇದೀಗ ಆನೆ ಕಾರ್ಯಾಚರಣೆ ನಿಲ್ಲಿಸಲಾಗಿದೆಯಾದರೂ ಹಲವಾರು ತೋಟಗಳಿಗೆ ಭಾರೀ ಹಾನಿಯಾಗಿವೆ. ಈ ರೀತಿಯ ಜಾತ್ರೆಯ ಮಾದರಿಯ ಕಾರ್ಯಾಚರಣೆಯಿಂದ ಹುಲಿಯ ಸೆರೆ ಸಾಧ್ಯವಾಗದು. ಇದರ ಬದಲಿಗೆ ಸ್ಥಳೀಯ ಅನುಭವಿ ವ್ಯಕ್ತಿಗಳನ್ನು ಸೇರಿಸಿಕೊಂಡು ಸದ್ದಿಲ್ಲದೆ ಕಾರ್ಯಾಚರಣೆ ನಡೆಸುವದೇ ಸೂಕ್ತ ಎಂಬ ಅಭಿಪ್ರಾಯವನ್ನೂ ಹಲವರು ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಕೆಲವು ತೋಟಗಳಲ್ಲಿ ವೃತ್ತಿಪರ ಕಳ್ಳರು ಸಾಕಾನೆಗಳನ್ನು ಬಳಸುತ್ತಿದ್ದು, ತೋಟಗಳ ನಡುವೆ ಆನೆಗಳು ತಿರುಗಾಡುವದರಿಂದ ಹಲವರ ತೋಟಗಳೂ ಹಾನಿಗೀಡಾಗುತ್ತಿವೆ ಎಂಬ ಅಸಹಾಯಕತೆಯನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಆಕ್ಷೇಪ ವ್ಯಕ್ತಗೊಂಡು ಇದೀಗ ಆನೆ ಕಾರ್ಯಾಚರಣೆ ನಿಲ್ಲಿಸಲಾಗಿದೆಯಾದರೂ ಹಲವಾರು ತೋಟಗಳಿಗೆ ಭಾರೀ ಹಾನಿಯಾಗಿವೆ. ಈ ರೀತಿಯ ಜಾತ್ರೆಯ ಮಾದರಿಯ ಕಾರ್ಯಾಚರಣೆಯಿಂದ ಹುಲಿಯ ಸೆರೆ ಸಾಧ್ಯವಾಗದು. ಇದರ ಬದಲಿಗೆ ಸ್ಥಳೀಯ ಅನುಭವಿ ವ್ಯಕ್ತಿಗಳನ್ನು ಸೇರಿಸಿಕೊಂಡು ಸದ್ದಿಲ್ಲದೆ ಕಾರ್ಯಾಚರಣೆ ನಡೆಸುವದೇ ಸೂಕ್ತ ಎಂಬ ಅಭಿಪ್ರಾಯವನ್ನೂ ಹಲವರು ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಕೆಲವು ತೋಟಗಳಲ್ಲಿ ವೃತ್ತಿಪರ ಕಳ್ಳರು ಸಾಕಾನೆಗಳನ್ನು ಬಳಸುತ್ತಿದ್ದು, ತೋಟಗಳ ನಡುವೆ ಆನೆಗಳು ತಿರುಗಾಡುವದರಿಂದ ಹಲವರ ತೋಟಗಳೂ ಹಾನಿಗೀಡಾಗುತ್ತಿವೆ ಎಂಬ ಅಸಹಾಯಕತೆಯನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಆಕ್ಷೇಪ ವ್ಯಕ್ತಗೊಂಡು ಇದೀಗ ಆನೆ ಕಾರ್ಯಾಚರಣೆ ನಿಲ್ಲಿಸಲಾಗಿದೆಯಾದರೂ ಹಲವಾರು ತೋಟಗಳಿಗೆ ಭಾರೀ ಹಾನಿಯಾಗಿವೆ. ಈ ರೀತಿಯ ಜಾತ್ರೆಯ ಮಾದರಿಯ ಕಾರ್ಯಾಚರಣೆಯಿಂದ ಹುಲಿಯ ಸೆರೆ ಸಾಧ್ಯವಾಗದು. ಇದರ ಬದಲಿಗೆ ಸ್ಥಳೀಯ ಅನುಭವಿ ವ್ಯಕ್ತಿಗಳನ್ನು ಸೇರಿಸಿಕೊಂಡು ಸದ್ದಿಲ್ಲದೆ ಕಾರ್ಯಾಚರಣೆ ನಡೆಸುವದೇ ಸೂಕ್ತ ಎಂಬ ಅಭಿಪ್ರಾಯವನ್ನೂ ಹಲವರು ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಕೆಲವು ತೋಟಗಳಲ್ಲಿ ವೃತ್ತಿಪರ ಕಳ್ಳರು ಮುಂದುವರಿದಿದ್ದು, ಜನರ ಹೋರಾಟದ ಕಾವೂ ಹೆಚ್ಚಾಗುತ್ತಿದೆ. ರೈತರ ಹೋರಾಟದಲ್ಲಿ ಇದೀಗ ವಿದ್ಯಾರ್ಥಿಗಳೂ ಪಾಲ್ಗೊಳ್ಳುವಂತಾಗಿ ರುವುದು ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.
ಎಲ್ಲೆಡೆ ಕರಾಳತೆಯ ಛಾಯೆ, ಅಘೋಷಿತ ಬಂದ್‌ನAತಹ ಸನ್ನಿವೇಶವಿದ್ದು, ಸರಕಾರ-ಅರಣ್ಯ ಇಲಾಖೆ ಆಧುನಿಕ ತಂತ್ರಜ್ಞಾನ ಬಳಸಿ ಆತಂಕ ಸೃಷ್ಟಿಸಿರುವ ಹುಲಿಯನ್ನು ತ್ವರಿತವಾಗಿ ಸೆರೆ ಹಿಡಿಯುವುದೋ ಅಥವಾ ಕೈಮೀರಿರುವ ಪರಿಸ್ಥಿತಿಯಲ್ಲಿ ಗುಂಡಿಕ್ಕಿ ಸಾಯಿಸುವ ಕೆಲಸವನ್ನು ತ್ವರಿತವಾಗಿ ಮಾಡಲೇಬೇಕಾಗಿದೆ.
