ಸೋಮವಾರಪೇಟೆ, ಮಾ. ೧೩: ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಿರಿಯ ನಾಗರಿಕರಿಗೆ ಕೋವಿಡ್-೧೯ ಸೋಂಕಿಗೆ ಸಂಬAಧಿಸಿದ ಲಸಿಕೆಯನ್ನು ನೀಡಲಾಯಿತು.
ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರದಂದು ಲಸಿಕೆ ನೀಡಲಾಗುತ್ತದೆ. ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೪ ಗಂಟೆವರೆಗೆ ಫಲಾನುಭವಿಗಳು ಪಡೆದುಕೊಳ್ಳಬಹುದು ಎಂದು ವೈದ್ಯಾಧಿಕಾರಿ ಕೆ.ಇಂದೂದರ್ ಹೇಳಿದರು.
೬೦ ವರ್ಷದಿಂದ ಮೇಲ್ಪಟ್ಟ ಸಾರ್ವಜನಿಕರು ಆಸ್ಪತ್ರೆಗೆ ಬಂದು ಉಚಿತವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ೪೫ ವರ್ಷದಿಂದ ೫೯ ವರ್ಷದವರೆಗಿನವರು ಹೃದಯ ಸಂಬAಧಿ ಕಾಯಿಲೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಇತರೆ ಕಾಯಿಲೆಗಳಿಂದ ಬಳಲುತ್ತಿರುವ ಸಾರ್ವಜನಿಕರು ಲಸಿಕೆ ಹಾಕಿಸಿಕೊಳ್ಳಲು ಅವಕಾಶವಿದೆ ಎಂದರು.
ಆಧಾರ್ ಕಾರ್ಡ್, ವೋಟರ್ ಐಡಿ, ಪಡಿತರ ಚೀಟಿ, ಡಿ.ಎಲ್, ಯಾವುದಾದರೂ ಒಂದನ್ನು ತರಬೇಕು. ತಮ್ಮ ಅಥವಾ ಕುಟುಂಬ ಸದಸ್ಯರ ಮೊಬೈಲ್ ಫೋನ್ ತರತಕ್ಕದ್ದು. ೪೫ ವರ್ಷ ಮೇಲ್ಪಟ್ಟವರು ನೋಂದಾಯಿತ ವೈದ್ಯರ ವೈದ್ಯಕೀಯ ಪ್ರಮಾಣಪತ್ರ ತರಬೇಕು ಎಂದು ಹೇಳಿದರು.