ಶನಿವಾರಸಂತೆ, ಮಾ. ೧೦: ಸಮೀಪದ ಮಾಲಂಬಿ ಗ್ರಾಮದ ಮಳೆ ಮಲ್ಲೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಆಚರಣೆಗೆ ಸಕಲ ಸಿದ್ಧತೆ ನಡೆದಿದೆ. ಇಂದು ವಿಶೇಷ ಪೂಜೆಗಳು ನಡೆಯಲಿದೆ.

ತಾ. ೧೧ ರಂದು ಬೆಳಿಗ್ಗೆ ೭ ರಿಂದ ಮಧ್ಯಾಹ್ನ ೨.೩೦ರ ವರೆಗೆ ದೇವತಾ ಪೂಜೆ ಹಾಗೂ ೧೨.೩೦ಕ್ಕೆ ಮಹಾಮಂಗಳಾರತಿ ನಡೆಯಲಿದೆ. ದೇವಾಲಯ ಸಮಿತಿ ಭಕ್ತಗಣಕ್ಕೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ.