ಮಡಿಕೇರಿ, ಮಾ. ೧೦ : ಕೊಡಗು ಜಿಲ್ಲೆಯ ಮಡಿಕೇರಿ ಯಲ್ಲಿ ನಿರ್ಮಾಣ ವಾಗುತ್ತಿರುವ ಮಿನಿ ವಿಧಾನ ಸೌಧದ ಮೊದಲ ಹಂತದ ಕಾಮ ಗಾರಿ ಪೂರ್ಣ ಗೊಂಡಿದ್ದು, ಎರಡನೇ ಹಂತದ ಕಾಮಗಾರಿಗೆ ಆಡಳಿತಾತ್ಮಕ ಅನು ಮೋದನೆ ನೀಡುವ ಬಗ್ಗೆ ಸರಕಾರದ ಪರಿಶೀಲನೆ ಯಲ್ಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದ್ದಾರೆ.

ವಿಧಾನ ಪರಿಷತ್ತು ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಅವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ. ಮಡಿಕೇರಿ ಯಲ್ಲಿ ನಿರ್ಮಾಣ ವಾಗುತ್ತಿರುವ ಮಿನಿ ವಿಧಾನ ಸೌಧ ಕಾಮಗಾರಿ ನಿಂತು ಹೋಗಿರುವದು ಸರಕಾರದ ಗಮನಕ್ಕೆ ಬಂದಿದೆಯೇ?, ನಿಂತು ಹೋಗಲು ಕಾರಣಗಳೇನು, ಕಾಮಗಾರಿಗೆ ಬಿಡುಗಡೆ ಯಾಗಿರುವ ಅನುದಾನ ವೆಷ್ಟು, ಎಷ್ಟು ವೆಚ್ಚವಾಗಿದೆ, ಕಾಮಗಾರಿ ಯಾವಾಗ ಪೂರ್ಣ ಗೊಳ್ಳಲಿದೆ ಎಂದು ಪ್ರಶ್ನೆ ಕೇಳಿ ದ್ದರು. ಇದಕ್ಕೆ ಉತ್ತರಿಸಿರುವ ಸಚಿವರು, ಮಡಿಕೇರಿ ತಾಲೂಕು ಕರ್ಣಂಗೇರಿ ಗ್ರಾಮದ ಸ.ನಂ.೩೮೨ ಮತ್ತು ೩೮೩ರಲ್ಲಿ ಒಟ್ಟು ೧.೭೫ಎಕರೆ ಜಾಗದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡಲು ರೂ.೫ಕೋಟಿ ಅನುದಾನ ಮಂಜೂರು ಮಾಡಿದ್ದು, ಈ ಪೈಕಿ ಕರ್ನಾಟಕ ಗೃಹ ಮಂಡಳಿಗೆ ರೂ.೪.೯೦ ಕೋಟಿ ಬಿಡುಗಡೆ ಮಾಡಲಾಗಿದ್ದು, ರೂ.೪.೫೫ ಕೋಟಿ ವೆಚ್ಚದಲ್ಲಿ ಮೊದಲ ಹಂತದ ಫ್ರೇಂ ವರ್ಕ್ ಮುಗಿದಿದೆ. ಎರಡನೇ ಹಂತದ ಕಾಮಗಾರಿಗೆ ರೂ.೫ ಕೋಟಿ ಮೊತ್ತದ ಅಂದಾಜು ಪಟ್ಟಿ ಸ್ವೀಕೃತವಾಗಿದ್ದು, ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ ಸರಕಾರದ ಪರಿಶೀಲನೆಯಲ್ಲಿದೆ ಎಂದು ತಿಳಿಸಿದ್ದಾರೆ.