ಮಡಿಕೇರಿ, ಮಾ. ೧೦: ಹುಲಿ ಸೆರೆ ಹಿಡಿಯಲು ಅಥವಾ ಕೊಲ್ಲಲು ನಿಮ್ಮಿಂದ ಆಗದಿದ್ದರೆ ನಮಗೆ ಬಿಡಿ ನಾವು ಹೊಡೆಯುತ್ತೇವೆ, ಹುಲಿ ಮದುವೆ ಮಾಡಿ ತೋರಿಸುತ್ತೇವೆ ಎಂದು ಜಿಲ್ಲೆಯ ಶಾಸಕರುಗಳಾದ ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಅವರುಗಳು ಸದನದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕರುಗಳು, ಹುಲಿ ದಾಳಿಗೆ ಜಿಲ್ಲೆಯಲ್ಲಿ, ಅದರಲ್ಲೂ ದಕ್ಷಿಣ ಕೊಡಗಿನಲ್ಲಿ ಲೆಕ್ಕವಿಲ್ಲ ದಷ್ಟು ಜಾನುವಾರುಗಳು ಬಲಿಯಾಗಿವೆ. ಇತ್ತೀಚೆಗೆ ಮೂವರು ಜನರನ್ನು ಹುಲಿ ಕೊಂದು ಹಾಕಿದೆ. ಹಾಡ ಹಗಲೇ ಗ್ರಾಮದೊಳಗೆ ಹುಲಿ ನುಸುಳುತ್ತಿದೆ, ಆದರೂ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಇಲಾಖೆಗೆ ಸಾಧ್ಯವಿಲ್ಲದಿದ್ದರೆ ನಮಗೆ ಬಿಟ್ಟುಬಿಡಿ ನಾವುಗಳೇ ಕೊಲ್ಲುತ್ತೇವೆ ಎಂದು ಅರಣ್ಯ ಇಲಾಖಾ ಸಚಿವ ಅರವಿಂದ ಲಿಂಬಾವಳಿ ಅವರನ್ನು ಒತ್ತಾಯಿಸಿದರು. ಶಾಸಕ ಬೋಪಯ್ಯ ಅವರು; ಹುಲಿ ಹಾವಳಿ ಹೆಚ್ಚಾಗುತ್ತಿದ್ದರೂ ಇಲಾಖೆ ಗಂಭೀರವಾಗಿ ಪರಿಗಣಿ ಸಿಲ್ಲ, ನರ ಭಕ್ಷಕ ಹುಲಿ ಯನ್ನು ಕೊಲ್ಲಲು ಅನುಮತಿ ನೀಡಿದ್ದರೂ ಆನೆಯ ಮೇಲೆ ಕುಳಿತುಕೊಂಡು ಕಾರ್ಯಾ ಚರಣೆ ನಡೆಸಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ, ನಿಮಗೆ ಆಗದಿದ್ದರೆ ನಮಗೆ ಬಿಡಿ ಹುಲಿ ಮದುವೆ ಮಾಡಿ ತೋರಿಸುದಾಗಿ ಹೇಳಿದರು. ಈ ಸಂದರ್ಭದಲ್ಲಿ ಹುಲಿ ಮದುವೆ ಅಂದರೆ ಏನು ಎಂದು ಪ್ರಶ್ನಿಸಿದ ಸಚಿವರಿಗೆ ‘ಅದನ್ನು ನಂತರ ಹೇಳ್ತೇನೆ’ ಎಂದು ಹೇಳಿದರು.
ಶಾಸಕ ರಂಜನ್ ಅವರು, ಇಲಾಖೆಗೆ ಹುಲಿ ಹಾವಳಿ ತಡೆಗಟ್ಟಲು ಆಗದಿದ್ದರೆ ನಮಗೆ ಅವಕಾಶ ಕೊಟ್ಟು ನೋಡಿ ನಾವೇ ಹೊಡೆಯುತ್ತೇವೆ. ನಮ್ಮಲ್ಲಿ ಹುಲಿ ಕೊಂದು ಹುಲಿಯೊಂದಿಗೆ ಹುಲಿ ಮದುವೆ ಮಾಡಿಸಿಕೊಂq Àವರಿದ್ದಾರೆ, ಗುಂಡು ಹೊಡೆಯಲು ನಮಗೆ ಅನುಮತಿ ಕೊಡಿ ಎಂದು ಹೇಳಿದರು. ಪ್ರತಿ ಕ್ರಿಯಿಸಿದ ಸಚಿವರು, ಇಲಾಖೆಗೆ ಅನು ಮತಿ ನೀಡಿರುವದಾಗಿ ಹೇಳಿದರು.