ನಾಪೋಕ್ಲು, ಮಾ. ೧೦: ಸಮೀಪದ ಬೆಟ್ಟಗೇರಿ ಕುಂಬಾರಕೊಪ್ಪಲು ಶ್ರೀರಾಮ ಮತ್ತು ಶ್ರೀದೇವಿ ದೇವಾಲಯದ ವಾರ್ಷಿಕೋತ್ಸವವು ತಾ. ೧೪ ರಂದು ನಡೆಯಲಿದೆ.

ಬೆಳಿಗ್ಗೆ ೧೦ ಗಂಟೆಯಿAದ ವಾರ್ಷಿಕ ಪೂಜೆ, ೧ ಗಂಟೆಗೆ ಅನ್ನಸಂತರ್ಪಣೆ, ಸಂಜೆ ದೇವರ ಜಳಕ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ ಎಂದು ದೇವಳದ ಆಡಳಿತ ಮಂಡಳಿ ತಿಳಿಸಿದೆ.