ಶ್ರೀಮಂಗಲ, ಮಾ. ೧೦ : ದ.ಕೊಡಗಿನಲ್ಲಿ ನರಹಂತಕ ಹುಲಿಯನ್ನು ಕೂಡಲೇ ಗುಂಡಿಟ್ಟು ಕೊಲ್ಲಬೇಕು ಮತ್ತು ಈ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವ ಸುಮಾರು ೪-೫ ಹುಲಿಗಳು ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಲ್ಲುತ್ತಿದ್ದು, ಅವುಗಳನ್ನು ಸೆರೆ ಹಿಡಿಯಬೇಕೆಂದು ಆಗ್ರಹಿಸಿ ಕುಟ್ಟ ಪಟ್ಟಣವನ್ನು ಬಂದ್ ಮಾಡಿ ಕರ್ನಾಟಕ-ಕೇರಳದ ಗಡಿ ಭಾಗದಲ್ಲಿ ಅಂತರರಾಜ್ಯ ಹೆದ್ದಾರಿ ೫ ಹುಲಿಗಳು ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಲ್ಲುತ್ತಿದ್ದು, ಅವುಗಳನ್ನು ಸೆರೆ ಹಿಡಿಯಬೇಕೆಂದು ಆಗ್ರಹಿಸಿ ಕುಟ್ಟ ಪಟ್ಟಣವನ್ನು ಬಂದ್ ಮಾಡಿ ಕರ್ನಾಟಕ-ಕೇರಳದ ಗಡಿ ಭಾಗದಲ್ಲಿ ಅಂತರರಾಜ್ಯ ಹೆದ್ದಾರಿ ಕುಟ್ಟ ಪಟ್ಟಣದಲ್ಲಿ ೨ ಗಂಟೆ ಕಾಲ ಅಂಗಡಿ-ಮುAಗಟ್ಟುಗಳನ್ನು ಮುಚ್ಚಿ ಬಂದ್ ಮಾಡಲಾಯಿತು. ಈ ಸಂದರ್ಭ ಮಾತನಾಡಿದ ಚಿಮ್ಮಂಗಡ ಗಣೇಶ್ ಅವರು ದ.ಕೊಡಗಿನ ಅರಣ್ಯದ ಅಂಚಿನಲ್ಲಿ ಕೆಲವೊಮ್ಮೆ ವನ್ಯ ಪ್ರಾಣಿಗಳ ಹಾವಳಿ ಕಂಡುಬರುತ್ತಿತ್ತು. ಆದರೆ ಇದೀಗ ದ.ಕೊಡಗಿನ ಅರಣ್ಯದಿಂದ ದೂರವಿರುವ ಗ್ರಾಮಗಳಲ್ಲಿಯೂ ಕಾಡಾನೆ, ಹುಲಿ, ಕಾಡುಕೋಣ, ಕರಡಿಗಳ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಮುಖ್ಯವಾಗಿ ಹುಲಿ ದಾಳಿಯಿಂದ ಮಾನವರ ಬಲಿಯಾಗುತ್ತಿದೆ. ಅರಣ್ಯ ಇಲಾಖೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ನರಹಂತಕ ಹುಲಿಯನ್ನು ಗುಂಡಿಟ್ಟು ಕೊಲ್ಲಲು ಕ್ರಮಕೈಗೊಳ್ಳಬೇಕು. ಹಸುಗಳನ್ನು ಹುಲಿ ದಾಳಿ ಮಾಡಿ ಕೊಲ್ಲುತ್ತಿದ್ದ ಸಮಯದಲ್ಲಿಯೇ ಹುಲಿಯನ್ನು ಅರವಳಿಕೆ ಗುಂಡು ಹಾರಿಸಿ ಸೆರೆ ಹಿಡಿದಿದ್ದರೆ ಅದು ನರಹಂತಕವಾಗಿ ರೂಪುತಾಳುತ್ತಿರಲಿಲ್ಲ ಎಂದು ಹೇಳಿದರು.

ದ.ಕೊಡಗಿನಲ್ಲಿ ಹುಲಿಯಿಂದ ಮೊದಲ ವ್ಯಕ್ತಿ ಬಲಿಯಾದಾಗಲೇ ಹುಲಿಯನ್ನು ಗುಂಡಿಟ್ಟು ಕೊಲ್ಲುವ ಆದೇಶವನ್ನು ಸರಕಾರ ಹಾಗೂ ಅರಣ್ಯ ಇಲಾಖೆ ಮಾಡಬೇಕಿತ್ತು. ಇಂತಹ ಆದೇಶವನ್ನು ತಕ್ಷಣ ಮಾಡಲು ರಾಜ್ಯ ಮತ್ತು ಕೇಂದ್ರ ಸರಕಾರವನ್ನು ಪ್ರತಿನಿಧಿಸುವ ಜಿಲ್ಲೆಯ ಶಾಸಕರು ಹಾಗೂ ಸಂಸದರು ಮಾಡಬೇಕಿತ್ತು. ಅವರ ನಿರ್ಲಕ್ಷö್ಯದಿಂದ ಮತ್ತೆ ಹುಲಿ ದಾಳಿಯಿಂದ ಎರಡು ಜನರ ಪ್ರಾಣ ಹಾನಿ ಮತ್ತು ಮತ್ತೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರು ವಂತಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅರಣ್ಯ ಇಲಾಖೆ ಹಲವು ದಿನದಿಂದ ಹುಲಿಯನ್ನು ಕಂಡಲ್ಲಿ ಗುಂಡು ಹೊಡೆಯಲು ಕಾರ್ಯಾಚರಣೆ ನಡೆಸಿ ವಿಫಲವಾಗಿದ್ದು, ಇವರಿಗೆ ಸಾಧ್ಯವಾಗದಿದ್ದರೆ ಸ್ಥಳೀಯ ಬೆಳೆಗಾರರು ಹುಲಿಗೆ ಗುಂಡು ಹೊಡೆಯಲು ಅನುಮತಿ ನೀಡಲಿ ಎಂದು ಒತ್ತಾಯಿಸಿದರು.

ಪ್ರತಿಭಟನೆಯ ಸಂದರ್ಭ ಕುಟ್ಟ ವೃತ್ತ ನಿರೀಕ್ಷಕ ಪರಿಶಿವಮೂರ್ತಿ ಹಾಗೂ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ರಾಜಪ್ಪ ಅವರ ಮೂಲಕ ತಹಶೀಲ್ದಾರ್‌ಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ಸಂದರ್ಭ ರೈತ ಸಂಘದ ಕಾರ್ಯದರ್ಶಿ ಕಳ್ಳಿಚಂಡ ಧನು, ಸಂಚಾಲಕ ಬಾದುಮಂಡ ಮಹೇಶ್, ಖಜಾಂಚಿ ಚಂಗುಲAಡ ರಾಜಪ್ಪ, ಚಿಮ್ಮಣಮಾಡ ರಮೇಶ್, ಪೆಮ್ಮಣಮಾಡ ನಿತಿನ್, ಪೋಕಚಂಡ ಮನು, ಮುಕ್ಕಾಟಿರ ನವೀನ್ ಅಯ್ಯಪ್ಪ ಮತ್ತಿತರರು ಭಾಗವಹಿಸಿದ್ದರು.