ಮಹಿಳಾ ರೈಲಿಗೆ ಮಹಿಳೆಯರಿಂದಲೇ ಹಸಿರು ನಿಶಾನೆ!
ಬೆಂಗಳೂರು, ಮಾ. ೮: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಬೆಂಗಳೂರಿನ ಕಾಂತ್ರಿವೀರ ಸಂಗೋಳಿ ರಾಯಣ್ಣ ರೈಲು ನಿಲ್ದಾಣದ ೮ನೇ ಪ್ಲಾಟ್ ಫಾರಂನಿAದ ಸಂಪೂರ್ಣ ಮಹಿಳಾ ಸಿಬ್ಬಂದಿಯೇ ಕಾರ್ಯಾಚರಿಸುವ ಬಸವ ಎಕ್ಸ್ಪ್ರೆಸ್ ರೈಲಿಗೆ ಮಹಿಳೆಯರೇ ಹರಿಸು ನಿಶಾನೆ ತೋರಿದರು. ಈ ಬಾರಿ ಹೆಂಗಸರೇ ರೈಲಿಗೆ ಹಸಿರು ಧ್ವಜ ಬೀಸಿದರು. ಆಡಳಿತ ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್, ಹಿರಿಯ ವಿಭಾಗೀಯ ಭದ್ರತಾ ಆಯುಕ್ತೆ ಮತ್ತು ವಿಭಾಗೀಯ ಸಿಬ್ಬಂದಿ ವ್ಯವಸ್ಥಾಪಕಿ ಎಸ್. ಉಮಾ ಅವರು ಮೈಸೂರು ಕಡೆಗೆ ಬಸವ ಎಕ್ಸ್ಪ್ರೆಸ್ ಅನ್ನು ಕಿಕ್‌ಸ್ಟಾರ್ಟ್ ಮಾಡಲು ಸಾಂಪ್ರದಾಯಿಕ ಹಸಿರು ಧ್ವಜವನ್ನು ಬೀಸಿದರು. ಇನ್ನು ಕೃಷ್ಣರಾಜಪುರಂ ರೈಲು ನಿಲ್ದಾಣದಲ್ಲಿ ಮಹಿಳಾ ಸಿಬ್ಬಂದಿಯೇ ಇರುವ ಗೂಡ್ಸ್ ರೈಲು ಸಂಚರಿಸಲಿದೆ. ಈ ವೇಳೆ ರೈಲಿನೊಳಗಿನ ಪ್ರಯಾಣಿಕರು ಮತ್ತು ಪ್ಲಾಟ್‌ಫಾರ್ಮ್ನಲ್ಲಿರುವವರು ಜೋರಾಗಿ ಕೂಗಿ, ಚಪ್ಪಾಳೆ ತಟ್ಟಿದ್ದು ನಿಜಕ್ಕೂ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಗುಡ್ಡದ ಮಣ್ಣು ಕುಸಿತದಿಂದ ನಾಲ್ವರು ಸಾವು
ಉತ್ತರ ಕನ್ನಡ, ಮಾ. ೮: ಗುಡ್ಡದ ಮಣ್ಣು ಕುಸಿತದಿಂದ ನಾಲ್ವರು ಕೂಲಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಯಲ್ಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಇಡಗುಂದಿ ಗ್ರಾಮದ ಸಂಪೇಬೈಲ್‌ನಲ್ಲಿ ಈ ಘಟನೆ ಸಂಭವಿಸಿದೆ. ಮೃತರನ್ನು ತಾಲೂಕಿನ ಕಿರವತ್ತಿ ಬಳಿಯ ಹೊಸಳ್ಳಿ ಗ್ರಾಮದ ಭಾಗ್ಯಶ್ರೀ ಯಡಗೆ (೨೧), ಲಕ್ಷಿö್ಮÃ ದೋಯಿಪಡೆ (೩೮) ಸಂತೋಷ ದೋಯಿಪಡೆ (೧೮) ಹಾಗೂ ದೋಯಿಪಡೆ ಎಂದು ಗುರುತಿಸಲಾಗಿದೆ. ಇಂದು ಸಂಜೆಯ ವೇಳೆಗೆ ಗುಡ್ಡದ ಮೇಲಿನ ಮಣ್ಣನ್ನು ಅರ್ಧ ತೆರವು ಮಾಡಿದ್ದ ಕಾರ್ಮಿಕರು, ನೀರು ಕುಡಿಯಲೆಂದು ಕೆಳಗೆ ಬಂದು ಕುಳಿತಿದ್ದಾರೆ. ಆ ಸಂದರ್ಭದಲ್ಲಿ ಏಕಾಏಕಿ ಸುರಿದ ಮಣ್ಣು ಕುಸಿತದಿಂದ ಕಾರ್ಮಿಕರು ಅದರ ಕೆಳಗೆ ಸಿಲುಕಿದ್ದಾರೆ. ಅಲ್ಲಿ ಒಟ್ಟು ಏಳು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಮಾಜಿ ಶಾಸಕರ ಮೊಮ್ಮಕ್ಕಳು ಶವವಾಗಿ ಪತ್ತೆ!
ರಾಯಚೂರು, ಮಾ. ೮: ನಿನ್ನೆ ಮಧ್ಯಾಹ್ನದಿಂದ ಕಾಣೆಯಾಗಿದ್ದ ಮಾನ್ವಿ ಕ್ಷೇತ್ರದ ಮಾಜಿ ಶಾಸಕ ಹಂಪಯ್ಯ ನಾಯಕ್ ಅವರ ಇಬ್ಬರು ಮೊಮ್ಮಕ್ಕಳ ಶವ ಹಳ್ಳವೊಂದರಲ್ಲಿ ಪತ್ತೆಯಾಗಿದೆ. ಮೃತರನ್ನು ಹಂಪಯ್ಯ ನಾಯಕ್ ಕಡೆಯ ಪುತ್ರರಾದ ಶಿವಾನಂದ ಅವರ ಮಕ್ಕಳಾದ ವರುಣ್ (೯) ಹಾಗೂ ಸಣ್ಣಯ್ಯ (೫) ಎಂದು ಗುರುತಿಸಲಾಗಿದೆ. ಮನೆ ಹೊರಗೆ ಆಟವಾಡುತ್ತಿದ್ದ ಈ ಬಾಲಕರು ನಿನ್ನೆ ಮಧ್ಯಾಹ್ನ ಎರಡು ಗಂಟೆಯಿAದ ನಾಪತ್ತೆಯಾಗಿದ್ದರು. ಹಳ್ಳಕ್ಕೆ ಸ್ನಾನ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದ್ದು ಸ್ಥಳಕ್ಕೆ ಸಿರವಾರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಒಂದು ರಾಷ್ಟç-ಒಂದು ಚುನಾವಣೆಯಿಂದ ಮತದಾನ ಹೆಚ್ಚಲಿದೆ: ತಜ್ಞರು
ಬೆಂಗಳೂರು, ಮಾ. ೮: ನಗರದ ಶ್ರೀ ಕೃಷ್ಣ ದೇವರಾಯ ಕಲಾ ಮಂದಿರದಲ್ಲಿ ಒಂದು ರಾಷ್ಟç ಒಂದು ಚುನಾವಣೆ ಸಂಬAಧ ರಾಜ್ಯ ಬಿಜೆಪಿಯ ಕೆಲವು ತಜ್ಞರು ಸಭೆ ನಡೆಸಿದರು. ಸಂಸದ ತೇಜಸ್ವಿ ಸೂರ್ಯ, ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ, ಸ್ವರಾಜ್ಯ ಆರ್. ಜಗನಾಥನ್ ಭಾಗವಹಿಸಿದ್ದರು. ಒಂದು ರಾಷ್ಟçದ ಒಂದು ಚುನಾವಣಾ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಸಾಂವಿಧಾನಿಕ ತಿದ್ದುಪಡಿಗಳು ಅಗತ್ಯ ಎಂದು ಹೇಳಿದ್ದಾರೆ. ಇದು ರಾಷ್ಟಿçÃಯ, ರಾಜ್ಯ, ನಿಗಮ ಮತ್ತು ಪಂಚಾಯಿತಿ ಮಟ್ಟದಲ್ಲಿ ಚುನಾವಣೆಗಳ ಏಕೀಕರಣಕ್ಕೆ ಅನುಕೂಲವಾಗಲಿದೆ ಎಂದು ಅವರು ಗಮನಸೆಳೆದರು. ಆದರೆ ಈ ಬದಲಾವಣೆಗಳಿಗೆ ಪಕ್ಷಾಂತರ ವಿರೋಧಿ ಕಾನೂನು, ಅವಿಶ್ವಾಸ ನಿರ್ಣಯ ಮತ್ತು ಇತರ ನೀತಿಗಳ ಬಗ್ಗೆ ಮರುಚಿಂತನೆ ಅಗತ್ಯವಿರುತ್ತದೆ. ಇದು ನಾಗರಿಕರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಆರ್. ಜಗನ್ನಾಥನ್ ವಿವರಿಸಿದರು. ಇದು ಮತದಾರರ ಸಂಖ್ಯೆಯನ್ನು ಹೆಚ್ಚಿಸುವುದಲ್ಲದೆ, ಉತ್ತಮ ಆಡಳಿತಕ್ಕೆ ಸಹಕಾರಿಯಾಗುತ್ತದೆ, ಏಕೆಂದರೆ ಪಕ್ಷಗಳು ರಾಷ್ಟಿçÃಯ, ರಾಜ್ಯ ಮತ್ತು ನಗರ ಮಟ್ಟದ ಪ್ರಣಾಳಿಕೆಗಳನ್ನು ಸಂಪರ್ಕಿಸಲು ಒತ್ತಾಯಿಸಲ್ಪಡುತ್ತವೆ" ಎಂದು ಅವರು ಹೇಳಿದರು. ಚುನಾವಣಾ ಪ್ರಕ್ರಿಯೆಯಲ್ಲಿನ ಭ್ರಷ್ಟಾಚಾರವನ್ನು ತಡೆಯುವುದಲ್ಲದೇ ನನ್ನಂತಹ ಸರಳ ಕಾರ್ಯಕರ್ತರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವಂತೆ ಮಾಡುತ್ತದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಮಧ್ಯಪ್ರದೇಶ ವಿಧಾನಸಭೆಯಲ್ಲಿ ಮತಾಂತರ ವಿರೋಧಿ ಮಸೂದೆ ಅಂಗೀಕಾರ
ಭೋಪಾಲ್, ಮಾ. ೮: ಮಧ್ಯಪ್ರದೇಶ ವಿಧಾನಸಭಾ ಅಧಿವೇಶನದಲ್ಲಿ ಮತಾಂತರ ವಿರೋಧಿ ಮಸೂದೆಗೆ ಅಂಗೀಕಾರ ನೀಡಲಾಗಿದೆ. ರಾಜ್ಯ ವಿಧಾನಸಭಾ ಸದಸ್ಯರು ಧ್ವನಿ ಮತದ ಮೂಲಕ ಮಸೂದೆಯ ಪರ ಮತ್ತು ವಿರೋಧ ಮತ ಚಲಾಯಿಸಿದರು. ಮತಾಂತರ ವಿರೋಧಿ ಮಸೂದೆಗೆ ಸಂಬAಧಿಸಿದAತೆ ಪರವಾಗಿ ಹೆಚ್ಚು ಮತಗಳು ಬಿದ್ದ ಹಿನ್ನೆಲೆ ಮಸೂದೆ ಅಂಗೀಕಾರಗೊAಡಿದೆ. ಈ ಹಿಂದೆ ಕೆಲವು ಪ್ರಕರಣಗಳಲ್ಲಿ ೧೦ ವರ್ಷ ಜೈಲು ಶಿಕ್ಷೆ ಮತ್ತು ಭಾರಿ ದಂಡವನ್ನು ವಿಧಿಸಿದ ಹಿನ್ನೆಲೆ ಮತಾಂತರ ವಿರೋಧಿ ಮಸೂದೆಗೆ ಸಂಬAಧಿಸಿದAತೆ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಕಳೆದ ಡಿಸೆಂಬರ್‌ನಲ್ಲಿ ಸುಗ್ರೀವಾಜ್ಞೆಯನ್ನು ತೆರವುಗೊಳಿಸಿದ ಸಂಪುಟವು ಈ ಬಗ್ಗೆ ಜನವರಿಯಲ್ಲಿ ಅಧಿಕೃತವಾಗಿ ಘೋಷಿಸಿತ್ತು. ಕಳೆದ ವಾರವಷ್ಟೇ ಅಂದರೆ ಮಾರ್ಚ್ ೧ರಂದು ವಿಧಾನಸಭಾ ಸದನದಲ್ಲಿ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ‍್ಯ ಮಸೂದೆ ೨೦೨೧ಅನ್ನು ಮಂಡಿಸಿದ್ದರು. ಈ ಸಂಬAಧ ಸುದೀರ್ಘ ಚರ್ಚೆಯ ಬಳಿಕ ಧ್ವನಿ ಮತದ ಮೂಲಕ ಮಸೂದೆ ಅಂಗೀಕರಿಸಲಾಗಿದೆ. ಕಳೆದ ಜನವರಿ ೯ ರಂದು ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ‍್ಯದ ಸುಗ್ರೀವಾಜ್ಞೆ, ೨೦೨೦ಕ್ಕೆ ರಾಜ್ಯಪಾಲೆ ಆನಂದಿ ಬೆಲ್ ಪಟೇಲ್ ಅವರು ಅಂಕಿತ ಹಾಕಿದ್ದರು. ವಿವಾಹ ಮತ್ತು ಯಾವುದೇ ಮಾರ್ಗದ ಮೂಲಕ ಒತ್ತಾಯಪೂರ್ವಕವಾಗಿ ಮತಾಂತರ ಮಾಡುವುದು ಕಂಡು ಬಂದಲ್ಲಿ ಅಂತವರಿಗೆ ದಂಡದ ಜೊತೆಗೆ ಜೈಲು ಶಿಕ್ಷೆಯನ್ನು ವಿಧಿಸುವುದಕ್ಕೆ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಬೆದರಿಕೆ, ಅನಗತ್ಯ ಪ್ರಭಾವ, ಬಲಾತ್ಕಾರ, ಮದುವೆ ಅಥವಾ ಇನ್ನಿತರ ಮೋಸದ ವಿಧಾನಗಳಿಂದ ಮತಾಂತರಕ್ಕೆ ಪ್ರಯತ್ನಿಸುವುದು ಕಂಡು ಬಂದರೆ ಅಂತವರಿಗೆ ಈ ಸುಗ್ರೀವಾಜ್ಞೆಯು ಧಾರ್ಮಿಕ ಸ್ವಾತಂತ್ರö್ಯ ಮಸೂದೆ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ಹೇಳಿದೆ.