ಮಡಿಕೇರಿ, ಮಾ. ೮ : ನಗರದ ವಿದ್ಯುತ್ ಉಪ-ಕೇಂದ್ರ ೬೬/೧೧ ಕೆವಿ ಹೊರಹೋಗುವ ಗದ್ದುಗೆ ಫೀಡರ್‌ನಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ನಿರ್ವಹಿಸಬೇಕಿದ್ದು, ತಾ. ೧೦ ರಂದು ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಉಪಕೇಂದ್ರ ಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸ ಲಾಗುವುದು.
ಮಡಿಕೇರಿ ನಗರ ವ್ಯಾಪ್ತಿಯ ಎ.ವಿ. ಶಾಲೆ, ಆಜಾದ್ ನಗರ, ಉಕ್ಕುಡ, ಗದ್ದುಗೆ, ಮಹದೇವಪೇಟೆ, ಮಾರ್ಕೆಟ್, ಕಾನ್ವೆಂಟ್ ಜಂಕ್ಷನ್ ಎಸ್.ಪಿ. ಕಚೇರಿ ಹಾಗೂ ಸುತ್ತಮುತ್ತಲ÷ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.