ಮಡಿಕೇರಿ, ಮಾ. ೯: ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಮಡಿಕೇರಿ ತಾಲೂಕು ಪಿಕಾರ್ಡ್ ವತಿಯಿಂದ ಜಿಲ್ಲೆಯಲ್ಲಿ ಕಾಫಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿರುವುದರಿAದ ಕಾಫಿಗೆ ಬೆಂಬಲ ಬೆಲೆ ನೀಡಲು, ದೀರ್ಘಾವಧಿ, ಮಧ್ಯಮಾವಧಿ ಸಾಲದ ಮರುಪಾವತಿ ಅವಧಿಯನ್ನು ಮುಂದೂಡುವAತೆ ಹಾಗೂ ಕೊಡಗಿನ ಕಾಫಿ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದನ್ನು ಪರಿಗಣಿಸಿ, ಕೊಡಗು ಜಿಲ್ಲೆಯಲ್ಲಿನ ಕಾಫಿ ಬೆಳೆಗಾರರು ಬಳಸುವ ೧೦ ಅಶ್ವ ಶಕ್ತಿವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಲು ಹಾಗೂ ಶೂನ್ಯ ಬಡ್ಡಿ ದರದ ಸಾಲ ಯೋಜನೆಯಲ್ಲಿ ರೇಷನ್‌ಕಾರ್ಡ್ ಹೊಂದುವುದು ಕಡ್ಡಾಯವೆಂಬ ಷರತ್ತಿಗೆ ಮಾರ್ಪಾಟು ಮಾಡಲು ಕೋರಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರಲ್ಲಿ ಮನವಿ ಮಾಡಲಾಗಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ ಅವರ ಸಹಕಾರದೊಂದಿಗೆ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಮನವಿ ಸಲ್ಲಿಸಿದರು.
ಈ ಸಂದರ್ಭ ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಪರಿಹರಿಸುವುದಾಗಿ ಸಹಕಾರ ಸಚಿವರು ಭರವಸೆ ನೀಡಿದರು. ಮನವಿ ಸಲ್ಲಿಕೆ ಸಂದರ್ಭ ಯೂನಿಯನ್ ಉಪಾಧ್ಯಕ್ಷ ಪಿ.ಸಿ. ಮನು ರಾಮಚಂದ್ರ, ನಿರ್ದೇಶಕರಾದ ನಂದಿನೆರವAಡ ರವಿ ಬಸಪ್ಪ, ಕೋಡಿರ ತಮ್ಮಯ್ಯ, ಚಿಮ್ಮಣಮಾಡ ಕೃಷ್ಣ ಗಣಪತಿ, ನಾಪಂಡ ಉಮೇಶ್ ಉತ್ತಪ್ಪ, ಕೊಡಪಾಲು ಗಣಪತಿ, ಪೆಮ್ಮಂಡ ಭರತ್, ಹೆಚ್.ಎನ್. ರಾಮಚಂದ್ರ ಹಾಗೂ ಪಿಕಾರ್ಡ್ ಬ್ಯಾಂಕ್‌ನ ನಿರ್ದೇಶಕರಾದ ಬೆಪ್ಪುರನ ಮೇದಪ್ಪ, ನಾಪಂಡ ರ‍್ಯಾಲಿ ಮಾದಯ್ಯ, ಅಮ್ಮಾಟಂಡ ಪೂಣಚ್ಚ, ಭುವನೇಶ್ವರ್ ಉಪಸ್ಥಿತರಿದ್ದರು.