ಮುಳ್ಳೂರು, ಮಾ. ೯: ಕರ್ನಾಟಕ ಜಾನಪದ ಪರಿಷತ್ತು ಶನಿವಾರಸಂತೆ ಹೋಬಳಿ ಘಟಕದ ಆಡಳಿತ ಮಂಡಳಿಯ ಪದಾಧಿಕಾರಿಗಳು, ನಿರ್ದೇಶಕರು ಮತ್ತು ಸದಸ್ಯರುಗಳ ಸಭೆ ಪರಿಷತ್ ಅಧ್ಯಕ್ಷೆ ಡಿ. ಸುಜಾಲದೇವಿ ಅವರ ಅಧ್ಯಕ್ಷತೆಯಲ್ಲಿ ಶನಿವಾರಸಂತೆಯ ಸುಪ್ರಜ ಗುರುಕುಲ ಶಾಲೆಯಲ್ಲಿ ನಡೆಯಿತು.

ಸುಜಲಾದೇವಿ ಅವರು ಮಾತನಾಡಿ, ಕಳೆದ ವರ್ಷ ೨೦೨೦ ರ ಸಾಲಿನಲ್ಲಿ ಕೊರೊನಾ ಸಮಸ್ಯೆಯಿಂದಾಗಿ ಪರಿಷತ್ ವತಿಯಿಂದ ಯಾವುದೇ ಚಟುವಟಿಕೆ ಕಾರ್ಯಕ್ರಮಗಳನ್ನು ನಡೆಸಲಾಗಲಿಲ್ಲ ಈ ಸಾಲಿನಲ್ಲಿ ಶನಿವಾರಸಂತೆ ಹೋಬಳಿ ಘಟಕದಿಂದ ಕಾರ್ಯಕ್ರಮ, ಚಟುವಟಿಕೆ ನಡೆಸುವುದು ಮತ್ತು ಘಟಕಕ್ಕೆ ಮತ್ತಷ್ಟು ಕ್ರಿಯಾಶೀಲ ಮತ್ತು ಆಸಕ್ತ ಸದಸ್ಯರನ್ನು ಸೇರ್ಪಡೆ ಗೊಳಿಸುವ ಉದ್ದೇಶದಿಂದ ಸಭೆಯನ್ನು ಕರೆಯಲಾಗಿದೆ ಎಂದರು. ಸಭೆಯಲ್ಲಿ ಜಾನಪದ ಪರಿಷತ್ ಘಟಕದ ವತಿಯಿಂದ ಮುಂದಿನ ಏಪ್ರಿಲ್ ತಿಂಗಳಲ್ಲಿ ತಾಲೂಕು ಮಟ್ಟದ ವಿವಿಧ ಜಾನಪದ ಸೊಗಡಿನ ಸ್ಪರ್ಧಾ ಕಾರ್ಯಕ್ರಮವನ್ನು ನಡೆಸುವಂತೆ ತೀರ್ಮಾನಿಸಲಾಯಿತು. ಇದೇ ತಿಂಗಳಲ್ಲಿ ಶನಿವಾರಸಂತೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ಗಾಯನ ಕಾರ್ಯಕ್ರಮ ನಡೆಸುವಂತೆಯೂ ತೀರ್ಮಾನಿ ಸಲಾಯಿತು. ಸಭೆಯಲ್ಲಿ ಪರಿಷತ್‌ಗೆ ನೂತನ ಸದಸ್ಯರನ್ನು ಸೇರ್ಪಡೆಗೊಳಿ ಸಲಾಗಿದ್ದು ಕೊಡ್ಲಿಪೇಟೆ ಕಾಲೇಜು ಉಪನ್ಯಾಸಕ ಕೆ.ಹೆಚ್. ಯೋಗೇಂದ್ರ, ಶನಿವಾರಸಂತೆ ಸಮಾಜ ಸೇವಕ ಸರ್ದಾರ್ ಅಹಮದ್, ಆಲೂರು-ಸಿದ್ದಾಪುರ ಮೊರಾರ್ಜಿ ಶಾಲೆಯ ಶಿಕ್ಷಕ ಸತೀಶ್, ಆಲೂರು-ಸಿದ್ದಾಪುರದ ಕ್ಯಾಲಿಗ್ರಾಫರ್ ಮತ್ತು ವ್ಯಕ್ತಿತ್ವ ವಿಕಾಸನ ಸಂಪನ್ಮೂಲ ವ್ಯಕ್ತಿ ಹೆಚ್.ಕೆ. ಶಿವಪ್ರಕಾಶ್, ಹಂಡ್ಲಿ ಗ್ರಾಮದ ಸೋಮಶೇಖರ್ ಇವರುಗಳನ್ನು ಘಟಕದ ನೂತನ ಸದಸ್ಯರಾಗಿ ಆಯ್ಕೆ ಮಾಡಿಕೊಳ್ಳಲಾಯಿತು. ಸಭೆಯಲ್ಲಿ ಘಟಕಕ್ಕೆ ಕೆಲವು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಈ ಪೈಕಿ ನೂತನ ಉಪಾಧ್ಯಕ್ಷರಾಗಿ ಎಂ.ಎನ್. ಹರೀಶ್ ಮತ್ತು ನೂತನ ಸಂಘಟನಾ ಕಾರ್ಯದರ್ಶಿಯಾಗಿ ಬಿ.ಎಸ್. ಪ್ರತಾಪ್ ಇವರುಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು.

ಸಭೆಯಲ್ಲಿ ಪರಿಷತ್ ಕಾರ್ಯದರ್ಶಿ ಸಿ.ಕೆ. ಸುರೇಶ್, ಪದಾಧಿಕಾರಿಗಳಾದ ಬಿ.ಎಸ್. ಪ್ರತಾಪ್, ಎಂ.ಎನ್. ಹರೀಶ್ ಸದಸ್ಯರಾದ ಕೆ.ಹೆಚ್. ಯೋಗೇಂದ್ರ, ನಳಿನಿ, ರಾಮು, ಲತ ದೇವರಾಜ್, ವೀಣಾ ರಮೇಶ್, ಭಾಸ್ಕರ್ ಮುಳ್ಳೂರು, ಸೋಮಶೇಖರ್ ಹಾಜರಿದ್ದರು.