ಮಡಿಕೇರಿ, ಮಾ. ೯: ಕೊಡಗಿನ ಜಮ್ಮಾ ಹಿಡುವಳಿದಾರರಿಗೆ ತಮ್ಮ ಹಕ್ಕು ಪಡೆಯಲು ಜಿಲ್ಲಾಡಳಿತದ ಹೊಸ ನಿರ್ದೇಶನದಂತೆ ಸಮಸ್ಯೆಯಾಗಿದ್ದು, ಇದನ್ನು ಹಿಂಪಡೆಯಬೇಕೆAದು ಕಾಂಗ್ರೆಸ್‌ನ ಪ್ರಮುಖರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಇತ್ತೀಚೆಗೆ ಜಿಲ್ಲಾಧಿಕಾರಿಗಳ ಮೌಖಿಕ ಆದೇಶದÀ ಅನ್ವಯ ಮಡಿಕೇರಿ ತಹಶೀಲ್ದಾರರು ದಿನಾಂಕ ೫-೩-೨೦೨೧ ರಂದು ಆದೇಶ ಹೊರಡಿಸಿದ್ದು ಇದರಲ್ಲಿ ನೋಂದಾಯಿತವಲ್ಲದ ದಸ್ತಾವೇಜುಗಳಂತೆ ಹಕ್ಕು ಬದಲಾವಣೆ ಮಾಡದಂತೆ ಆದೇಶವಿದೆ. ಇದು ಕೊಡಗಿನ ಜಮ್ಮಾ ಹಿಡುವಳಿದಾರರಿಗೆ ತಮ್ಮ ಜಾಗದ ಹಕ್ಕು ಪಡೆಯಲು ಮಾರಕವಾಗಿರುವುದರಿಂದ ಇದರ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಸದರಿ ಆದೇಶವನ್ನು ಹಿಂಪಡೆಯುವAತೆ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರಾ ಮೈನಾ ಅವರು ನಿಯೋಗದೊಂದಿಗೆ ತೆರಳಿ ಕೊಡಗು ಜಿಲ್ಲಾಧಿಕಾರಿಗಳಾದ ಚಾರುಲತಾ ಸೋಮಲ್ ಅವರಿಗೆ ಮನವಿ ಸಲ್ಲಿಸಿದರು.

ಕೊಡಗಿನ ಕಂದಾಯ ದಾಖಲೆಗಳು ಇತರ ಜಿಲ್ಲೆಗಳ ದಾಖಲೆಗಳಿಗೆ ಹೋಲಿಸಿದರೆ ವಿಭಿನ್ನವಾಗಿದ್ದು ಪಟ್ಟೆದಾರ ಎಂಬ ಹೆಸರಿನಲ್ಲಿ ಸಂಪೂರ್ಣ ಕುಟುಂಬದ ದಾಖಲೆ ಇರುತ್ತದೆ. ಕುಟುಂಬದಲ್ಲಿ ನೂರಾರು ಸದಸ್ಯರು ಇದ್ದು ಹಿಂದಿನ ಸರ್ಕಾರಿ ಸುತ್ತೋಲೆಯಂತೆ (ಸುತ್ತೋಲೆ ಸಂಖ್ಯೆ ಕಂ.ಇ.೨೧೧/ಮು.ನೋ.ಮು/೯೯ತಾರೀಕು.೧೨-೦೫-೧೯೯೯) ಭಾಗವೊಂದರ ರೂ. ೨೫೦ ಮುದ್ರಾಂಕ ಶುಲ್ಕ ಪಾವತಿಸಿ ನೋಂದಾಯಿತವಲ್ಲದ

(ಮೊದಲ ಪುಟದಿಂದ) ದಸ್ತಾವೇಜು ಸ್ವೀಕರಿಸಿ ಖಾತೆ ವರ್ಗಾವಣೆ ಮಾಡಲಾಗುತ್ತಿತ್ತು .ತದನಂತರ ಎಲ್ಲಾ ಕುಟುಂಬಸ್ಥರ ಒಪ್ಪಿಗೆ ಸಹಿ ಪಡೆದು ಅವರ ಫೋಟೋ, ಆಧಾರ್ ಕಾರ್ಡ್ ಪ್ರತಿ ಪಡೆದು ಪಟ್ಟೆದಾರರ ಮಕ್ಕಳ ಒಪ್ಪಿಗೆ ಪಡೆದು ಹಕ್ಕುದಾರರ ಹೆಸರಿಗೆ ವರ್ಗ ಮಾಡಲಾಗುತ್ತಿತ್ತು. ಆದರೆ ಈಗ ತಹಶೀಲ್ದಾರರು ಹೊರಡಿಸಿದ ಆದೇಶದಂತೆ ಪಟ್ಟೆದಾರರ ಅಥವಾ ಅವರ ಮಕ್ಕಳು ಉಪ ನೋಂದಾವಣಿ ಅಧಿಕಾರಿಗಳ ಮೂಲಕ ನೋಂದಾವಣಿ ಮಾಡಿದರೆ ಮಾತ್ರ ಖಾತೆ ವರ್ಗಾವಣೆ ಆಗಲಿದೆ. ತಮ್ಮ ಸ್ವಾಧೀನದಲ್ಲಿ ಇಲ್ಲದ ಜಮೀನನ್ನು ಪಟ್ಟದಾರರಾಗಲಿ ಅವರ ಮಕ್ಕಳಾಗಲಿ ನೋಂದಾಯಿಸಿ ಕೊಡಲು ಮುಂದೆ ಬರುವುದಿಲ್ಲ .ಅಲ್ಲದೆ ಹಣಕ್ಕೆ ಕೂಡ ಬೇಡಿಕೆ ಇಡುವ ಸಾಧ್ಯತೆ ಇದೆ. ಆದ್ದರಿಂದ ಸದರಿ ವಿಷಯದ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಈ ಆದೇಶವನ್ನು ಹಿಂಪಡೆಯಲು ತೆನ್ನೀರಾ ಮೈನಾ ರವರು ಮನವಿ ಮಾಡಿದ್ದಾರೆ. ಸಮಸ್ಯೆ ಬಗ್ಗೆ ವಿವರಣೆ ಪಡೆದ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ನಿಯೋಗದಲ್ಲಿ ಯುವ ಕಾಂಗ್ರೆಸ್ ನಗರಾಧ್ಯಕ್ಷ ಮಂಡಿರಾ ಸದಾ ಮುದ್ದಪ್ಪ, ತೋಲಂಡ ನಾಣಯ್ಯ, ನಗರಸಭಾ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ, ಕಾಂಗ್ರೆಸ್ ಮುಖಂಡರಾದ ಮುದ್ದುರಾಜ್, ಹನೀಫ್ ಉಪಸ್ಥಿತರಿದ್ದರು.ಜಮ್ಮಾ ಆದೇಶ ಹಿಂಪಡೆಯಲು ಆಗ್ರಹ