ಗೋಣಿಕೊಪ್ಪಲು, ಮಾ. ೯: ಆದಿವಾಸಿ ಬುಡಕಟ್ಟು ಕಾರ್ಮಿಕರ ಸಂಘದ ವತಿಯಿಂದ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಆವರಣದಲ್ಲಿ ನಡೆಯುತ್ತಿರುವ ಅಹೋರಾತ್ರಿ ಚಳವಳಿ ೯ನೇ ದಿನಕ್ಕೆ ಕಾಲಿಟ್ಟಿದೆ. ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದ ಬಳಿ ಇರುವ ಬಸವೇಶ್ವರ ಬಡಾವಣೆಯ ಆದಿವಾಸಿಗಳು ಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಿ ಕಳೆದ ೯ ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಸರ್ಕಾರ ಹಕ್ಕು ಪತ್ರ ನೀಡಿದ್ದರೂ ಇಲ್ಲಿಯ ತನಕ ಮೂಲಭೂತವಾಗಿ ಬೇಕಾದ ವಸತಿ ನಿರ್ಮಾಣ ಮಾಡಿಕೊಡುವಲ್ಲಿ ವಿಫಲರಾಗಿರು ವುದನ್ನು ಖಂಡಿಸಿ ಅನಿವಾರ್ಯವಾಗಿ ಪ್ರತಿಭಟನೆಗೆ ನಿರ್ಧರಿಸಿರುವುದಾಗಿ ಹೋರಾಟದ ಮುಖಂಡರಾದ ಗಪ್ಪು ತಿಳಿಸಿದ್ದಾರೆ. ಭರವಸೆ ನೀಡಿದ ಅಧಿಕಾರಿಗಳು ನೀಡಿದ ಭರವಸೆಯನ್ನು ಈಡೇರಿಸುವವರೆಗೂ ಪ್ರತಿಭಟನೆ ಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಹೋರಾಟಗಾರರು ತಿಳಿಸಿದರು. ಮಹಿಳೆಯರು, ಮಕ್ಕಳಾದಿಯಾಗಿ ತಮ್ಮ ಹಕ್ಕನ್ನು ಪಡೆಯಲು ಆದಿವಾಸಿಗಳು ಪ್ರತಿಭಟನೆ ಮುಂದುವರೆಸುತ್ತಿದ್ದಾ