ಗೋಣಿಕೊಪ್ಪಲು, ಮಾ. ೯: ಕುಟ್ಟ ಬಳಿಯ ತೈಲ ಗ್ರಾಮದಲ್ಲಿ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದುಹಾಕಿರುವ ಘಟನೆ ಸಂಭವಿಸಿದೆ.

ಪೊನ್ನಿ ಬಾಬು ಎಸ್ಟೇಟ್‌ನ ರೈಟರ್ ತಮ್ಮ ಹಸುವನ್ನು ಮೇಯಲು ಸಮೀಪದ ಭತ್ತದ ಗದ್ದೆಯಲ್ಲಿ ಬಿಟ್ಡಿದ್ದರು. ಮಧ್ಯಾಹ್ನ ವೇಳೆ ಹುಲಿಯೊಂದು ದಾಳಿ ನಡೆಸಿ ಕೊಂದುಹಾಕಿದೆ.ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಟ್ಟ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಮ್ಮಿಯಾಲದಲ್ಲಿ ಕೋಣಮರಿ ಬಲಿ

ಸೋಮವಾರಪೇಟೆ: ಮತ್ತೊಂದು ಪ್ರಕರಣದಲ್ಲಿ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಮ್ಮಿಯಾಲ ಗ್ರಾಮದ ಮೊಣ್ಣಂಡ

ಶಿವಯ್ಯ ಅವರ ದನದ ಕೊಟ್ಟಿಗೆಯಲ್ಲಿ ನಿನ್ನೆ ಮಧ್ಯರಾತ್ರಿ ಹುಲಿ ದಾಳಿ ಮಾಡಿ ಕೋಣಮರಿಯನ್ನು ಕೊಂದುಹಾಕಿದೆ. ಕೂಡಲೇ ಸಂಬAಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಮಾಲೀಕ ಶಿವಯ್ಯ ಒತ್ತಾಯಿಸಿದ್ದಾರೆ.