ಮಡಿಕೇರಿ, ಮಾ. ೯: ಇರ್ಪು ಶ್ರೀ ರಾಮೇಶ್ವರ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ತಾ. ೯, ೧೦ ರಂದು ಹರಕೆ, ಬಳಕು ಪೂಜೆ, ತಾ. ೧೧ ರಂದು ಶಿವರಾತ್ರಿ ಉತ್ಸವ, ತಾ. ೧೨ ರಂದು ಜಾತ್ರಾ ಮಹೋತ್ಸವ ನಡೆಯಲಿದೆ. ಶಿವರಾತ್ರಿ ಪ್ರಯುಕ್ತ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದೆ.
ಕೋವಿಡ್ ನಿಯಮಾವಳಿಯ ಕಾರಣ ಸಾಮೂಹಿಕ ಅನ್ನದಾನ ಕಾರ್ಯಕ್ರಮ ಇರುವುದಿಲ್ಲ. ಉಳಿದಂತೆ ಎಲ್ಲಾ ದೇವತಾ ಕಾರ್ಯಕ್ರಮ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಟಿ. ಶೆಟ್ಟಿಗೇರಿ ಶ್ರೀ ಸಿದ್ದಾಶ್ರಮ: ಟಿ. ಶೆಟ್ಟಿಗೇರಿಯ ಶ್ರೀ ಸಿದ್ದಾಶ್ರಮದಲ್ಲಿ ಶಿವರಾತ್ರಿ ಪ್ರಯುಕ್ತ ತಾ. ೧೧ ರಂದು ಬೆಳಿಗ್ಗೆ ೬ ಗಂಟೆಯಿAದ ೭ ಗಂಟೆಯವರೆಗೆ ನಿತ್ಯಪೂಜೆ, ೭ ಗಂಟೆಯಿAದ ೮ ಗಂಟೆಯವರೆಗೆ ಪಂಚಾಕ್ಷರಿ ಭಜನೆ, ೮.೩೦ ರಿಂದ ೯ ಗಂಟೆಯವರೆಗೆ ಗಣಪತಿ ಹೋಮ, ೯ ಗಂಟೆಯಿAದ ೧೦ ಗಂಟೆಯವರೆಗೆ ಗೋಣಿಕೊಪ್ಪಲಿನ ಭಗವಾನ್ ಶ್ರೀ ಸತ್ಯ ಸಾಯಿಬಾಬ ಭಕ್ತ ವೃಂದದವರಿAದ ಭಜನೆ ಮತ್ತು ಸಂಕೀರ್ತನೆ, ೧೦ ರಿಂದ ೧೧ ಗಂಟೆಯವರೆಗೆ ಶಿವಲಿಂಗಕ್ಕೆ ಬಿಲ್ವರ್ಚನೆ, ಪಂಚಾಮೃತ ರುದ್ರಾಭಿಷೇಕ, ಮಹಾಮಂಗಳಾರತಿ ಹಾಗೂ ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಅತ್ತೂರು ಗ್ರಾಮದ ಶ್ರೀ ಪಂಚಲಿAಗೇಶ್ವರ ದೇವಸ್ಥಾನದಲ್ಲಿ ಎರಡು ದಿನಗಳ ಕಾಲ ಮಹಾ ಶಿವರಾತ್ರಿ ಅಂಗವಾಗಿ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ.
ತಾ. ೧೧ ರಂದು ಬೆಳಿಗ್ಗೆ ೬ ರಿಂದ ಪುಣ್ಯಾಹಃ ಕಲಶ ಪ್ರತಿಷ್ಠೆ ೬.೩೦ಕ್ಕೆ ಗಣಪತಿ ಹೋಮ, ಬೆಳಿಗ್ಗೆ ೧೧ ಗಂಟೆಗೆ ಮಹಾಪೂಜೆ, ೧೨ ಗಂಟೆಗೆ ಶ್ರೀ ದೇವರ ಬಲಿ, ಪ್ರಸಾದ ವಿತರಣೆ. ಸಂಜೆ ದೀಪಾರಾಧನೆ ನಡೆಯಲಿದೆ. ತಾ. ೧೨ ರಂದು ಬೆಳಗಿನಿಂದ ವಿವಿಧ ಪೂಜಾ ಕಾರ್ಯಗಳು ನೆರವೇರಲಿವೆ.
ಮಧ್ಯಾಹ್ನ ೧೨ ಗಂಟೆಗೆ ವಿಶೇಷ ಅಲಂಕಾರ ಸಹಿತ ಶ್ರೀ ದೇವರ ಮಹಾಪೂಜೆ ನಡೆಯಲಿದ್ದು, ಅಂದು ಸಂಜೆ ೫ ಗಂಟೆಗೆ ಶ್ರೀ ದೇವರ ಭೂತ ಬಲಿ ಘೋಷ ಯಾತ್ರೆ, ಹಾರಂಗಿ ನದಿಯಿಂದ ಶ್ರೀ ದೇವರ ಅವಭೃತ ಸ್ನಾನ, ನಂತರ ಮೆರವಣಿಗೆಯೊಂದಿಗೆ ವಿವಿಧ ದೈವಿಕ ಕಾರ್ಯಗಳು ನೆರವೇರಲಿವೆ. ಎರಡು ದಿನಗಳ ಕಾಲ ಅನ್ನಸಂತರ್ಪಣೆ ನಡೆಯಲಿವೆ ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.