ಮಡಿಕೇರಿ, ಮಾ. ೯: ಪೌರಕಾರ್ಮಿಕರ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಯೋಜನೆ ಗಳನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಯೋಜನೆಗಳ ಮೂಲಕ ಪೌರಕಾರ್ಮಿಕರ ಸಬಲೀಕರಣ ಸಾಧ್ಯವಾಗಲಿದೆ ಎಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಹಾಗೂ ಮಾಜಿ ಸಚಿವ ಶಿವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ, ನಗರ ಸ್ಥಳೀಯ ಸಂಸ್ಥೆ ವತಿಯಿಂದ ಪೌರಕಾರ್ಮಿಕರೊಂದಿಗೆ ಸಂವಾದ ಹಾಗೂ ವಿವಿಧ ಇಲಾಖೆಯ ಯೋಜನೆ ಕುರಿತು ಜಾಗೃತಿ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ನಗರಸಭೆ, ಪಟ್ಟಣ ಪಂಚಾಯ್ತಿ, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿ ರುವ ಪೌರಕಾರ್ಮಿಕರ ಸ್ಥಿತಿಗತಿ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಪ್ರವಾಸ ಹಮ್ಮಿಕೊಂಡಿದ್ದೇನೆ. ಎಲ್ಲಾ ಜಿಲ್ಲೆಯಲ್ಲೂ ಪೌರಕಾರ್ಮಿಕರ ಕಷ್ಟ, ಸುಖಗಳನ್ನು ಆಲಿಸುತ್ತಿದ್ದೇನೆ. ಅಧಿಕಾರಿಗಳ ಮಟ್ಟದಲ್ಲಿ ಸಮಸ್ಯೆ ಪರಿಹಾರ ಆಗದಿದ್ದರೆ ಸರ್ಕಾರ ಮಟ್ಟದಲ್ಲಿ ಸಮಸ್ಯೆ ಪರಿಹರಿಸಲು ಕ್ರಮವಹಿಸುತ್ತೇನೆ ಎಂದು ಭರವಸೆ ನೀಡಿದ ಅವರು, ಉನ್ನತ ಶಿಕ್ಷಣ ಪಡೆಯುವ ಪೌರಕಾರ್ಮಿಕರ ಮಕ್ಕಳಿಗೆ ವಿವಿಧ ಯೋಜನೆ ಮೂಲಕ ಪ್ರೋತ್ಸಾಹ ಧನ ನೀಡಲು ಅವಕಾಶವಿದೆ. ಪೂರ್ವ ಪ್ರಾಥಮಿಕ ದಿಂದ ಉನ್ನತ ವಿದ್ಯಾಭ್ಯಾಸದ ತನಕ ಉಚಿತ ಶಿಕ್ಷಣ, ೫೦೦ ಜನರಿಗೆ ಒಬ್ಬ ಪೌರಕಾರ್ಮಿಕರನ್ನು ನಿಯೋಜನೆ, ಸುಖಗಳನ್ನು ಆಲಿಸುತ್ತಿದ್ದೇನೆ. ಅಧಿಕಾರಿಗಳ ಮಟ್ಟದಲ್ಲಿ ಸಮಸ್ಯೆ ಪರಿಹಾರ ಆಗದಿದ್ದರೆ ಸರ್ಕಾರ ಮಟ್ಟದಲ್ಲಿ ಸಮಸ್ಯೆ ಪರಿಹರಿಸಲು ಕ್ರಮವಹಿಸುತ್ತೇನೆ ಎಂದು ಭರವಸೆ ನೀಡಿದ ಅವರು, ಉನ್ನತ ಶಿಕ್ಷಣ ಪಡೆಯುವ ಪೌರಕಾರ್ಮಿಕರ ಮಕ್ಕಳಿಗೆ ವಿವಿಧ ಯೋಜನೆ ಮೂಲಕ ಪ್ರೋತ್ಸಾಹ ಧನ ನೀಡಲು ಅವಕಾಶವಿದೆ. ಪೂರ್ವ ಪ್ರಾಥಮಿಕ ದಿಂದ ಉನ್ನತ ವಿದ್ಯಾಭ್ಯಾಸದ ತನಕ ಉಚಿತ ಶಿಕ್ಷಣ, ೫೦೦ ಜನರಿಗೆ ಒಬ್ಬ ಪೌರಕಾರ್ಮಿಕರನ್ನು ನಿಯೋಜನೆ, ನಿಜಕ್ಕೂ ಶೋಚನೀಯ ಸ್ಥಿತಿಯಲ್ಲಿದೆ. ಇನ್ನೂ ಮುಖ್ಯವಾಹಿನಿಗೆ ಬಾರದೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಪೌರಕಾರ್ಮಿಕರು ಸಂಘಟಿತರಾಗಿ ಸರಕಾರದ ಯೋಜನೆಗಳನ್ನು ಬಳಸಿಕೊಳ್ಳಬೇಕು. ಕೇವಲ ಪ್ರತಿಭಟನೆಗೆ ಸಂಘಟನೆ ಸೀಮಿತವಾಗಬಾರದು ಎಂದು ಸಲಹೆ ನೀಡಿದರು.
ಅಧಿಕಾರಿಗಳು ಪೌರಕಾರ್ಮಿಕರಿಗೆ ಅಗತ್ಯ ಸೌಲಭ್ಯ ಒದಗಿಸಬೇಕು. ಇಲ್ಲದಿದ್ದಲ್ಲಿ ಆಯೋಗಕ್ಕೆ ಶಿಸ್ತು ಕ್ರಮ ವಿಧಿಸುವ ಅಧಿಕಾರ ಇದೆ. ಮಾನವೀಯತೆ ದೃಷ್ಟಿಯಲ್ಲಿ ಪೌರಕಾರ್ಮಿಕರ ಸರ್ವತೋಮುಖ ಅಭಿವೃದ್ಧಿಗೆ
(ಮೊದಲ ಪುಟದಿಂದ) ಅಧಿಕಾರಿಗಳು ಸ್ಪಂದಿಸಬೇಕು. ಸಂವಿಧಾನದ ಆಶಯ ಈಡೇರಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಪಾದಪೂಜೆ ಮಾಡಿ ಪೌರಕಾರ್ಮಿಕರಿಗೆ ಗೌರವ ನೀಡಿದ್ದಾರೆ. ಸ್ಪಂದಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಶಿವಣ್ಣ ಹೇಳಿದರು.
ಸಂವಾದದಲ್ಲಿ ವಿವಿಧ ಬೇಡಿಕೆ
ಆಯೋಗದ ಅಧ್ಯಕ್ಷರು ಮತ್ತು ಪೌರಕಾರ್ಮಿಕರ ನಡುವೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅನೇಕ ಸಮಸ್ಯೆ ಅನಾವರಣಗೊಂಡಿತು. ಗ್ರಾ.ಪಂ ಪೌರಕಾರ್ಮಿಕರಿಗೆ ಭವಿಷ್ಯ ನಿಧಿ (ಪಿ.ಎಫ್) ಸಿಗುತ್ತಿಲ್ಲ ಈ ನಿಟ್ಟಿನಲ್ಲಿ ಸರಕಾರ ಆದೇಶ ಮಾಡುವಂತೆ ಹಾಗೂ ನೇರ ಪಾವತಿಯಲ್ಲಿರುವವರನ್ನು ಖಾಯಂ ನೌಕರರನ್ನಾಗಿ ಮಾಡುವಂತೆ ಪೌರಕಾರ್ಮಿಕರು ಕೋರಿದರು.
ಮಡಿಕೇರಿ ಪೌರಕಾರ್ಮಿಕ ಚಂದ್ರು ಮಾತನಾಡಿ, ಮಳೆಗಾಲ ಸಂದರ್ಭದಲ್ಲಿ ಬರೆ ಕುಸಿತ ಸಂದರ್ಭದಲ್ಲಿ ಮಣ್ಣು ತೆರವು ಮಾಡಲು ಕಷ್ಟದಾಯಕವಾಗುತ್ತದೆ. ನಾವು ಬೇರೆ ಕಡೆಗಳಿಂದ ವಲಸೆ ಬಂದವರು ಆದರಿಂದ ಶಾಶ್ವತ ಸೂರು ಕಲ್ಪಿಸುವಂತೆ ಕೇಳಿಕೊಂಡರು. ನೇರ ಪಾವತಿಯಲ್ಲಿರುವರನ್ನು ಶಾಶ್ವತ ನೇಮಕಾತಿ ಮಾಡುವಂತೆ ಮನವಿ ಮಾಡಿದರು.
ಮಡಿಕೇರಿ ಪೌರಕಾರ್ಮಿಕ ಸಂಘದ ಅಧ್ಯಕ್ಷ ರಂಗಪ್ಪ ಮಾತನಾಡಿ, ನಗರಸಭೆ ಅಧಿಕಾರಿಗಳು ಉತ್ತಮವಾಗಿ ಗಮನಿಸಿಕೊಳ್ಳುತ್ತಿದ್ದಾರೆ. ೧೫ ದಿನಕ್ಕೊಮ್ಮೆ ಅಗತ್ಯ ಶೂ, ಗ್ಲೌಸ್ ನೀಡುತ್ತಿದ್ದಾರೆ. ಆರೋಗ್ಯ ತಪಾಸಣೆ ನಡೆಯುತ್ತಿದೆ. ಪುನರ್ವಸತಿ ಜಾಗ ಗುರುತು ಮಾಡಿದ್ದಾರೆ. ಶೀಘ್ರ ವಸತಿ ಕಲ್ಪಿಸುವಂತೆ ಮನವಿ ಮಾಡಿದರು.
ಪೌರಕಾರ್ಮಿಕ ಹನುಮಂತಯ್ಯ ಮಾತನಾಡಿ, ಜೀವನ ತುಂಬ ಕಷ್ಟದಾಯಕವಾಗಿದೆ. ಮಕ್ಕಳು ಎಂ.ಕಾA. ಶಿಕ್ಷಣ ಪಡೆದಿದ್ದಾರೆ. ಆದರೆ, ಕೆಲಸ ಸಿಗುತ್ತಿಲ್ಲ. ಉದ್ಯೋಗ ಕಲ್ಪಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವಣ್ಣ ಅವರು, ಪೌರಕಾರ್ಮಿಕರ ವಿದ್ಯಾವಂತ ಮಕ್ಕಳನ್ನು ಸಮೀಕ್ಷೆ ಮಾಡಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.
ವೀರಾಜಪೇಟೆಯ ಪೌರಕಾರ್ಮಿಕ ಮುರುಗಾ ಮಾತನಾಡಿ, ನನ್ನ ಸಹೋದರ ಪೌರಕಾರ್ಮಿಕರಾಗಿ ದುಡಿಯುವ ಸಂದರ್ಭ ಮೃತಪಟ್ಟಿದ್ದಾನೆ. ಆದರೆ, ಕುಟುಂಬಕ್ಕೆ ಯಾವುದೇ ಪರಿಹಾರ ದೊರೆತಿಲ್ಲ. ಇಡೀ ಕುಟುಂಬ ಪೌರಕಾರ್ಮಿಕರಾಗಿ ದುಡಿಯುತ್ತಿದ್ದು, ವಸತಿ ಕಲ್ಪಿಸುವಂತೆ ಕೋರಿದರು.
ಪೌರಕಾರ್ಮಿಕ ಮಹಿಳೆ ಮಣಿ ಮಾತನಾಡಿ, ನನ್ನ ಪತಿ ಸಾವನ್ನಪ್ಪಿದ ಬಳಿಕ ನನಗೆ ಕೆಲಸ ದೊರಕಿತು. ಆದರೆ, ವಸತಿ ಇಲ್ಲದೆ ವೀರಾಜಪೇಟೆಯಿಂದ ನಿತ್ಯ ಬರುತ್ತಿದ್ದೇವೆ. ಇದರಿಂದ ಸಮಸ್ಯೆ ಉಂಟಾಗಿದೆ. ಮಡಿಕೇರಿಯಿಂದ ವೀರಾಜಪೇಟೆಗೆ ವರ್ಗಾಯಿಸುವಂತೆ ಮನವಿ ಮಾಡಿದರು. ಈ ಸಂಬAಧ ಜಿಲ್ಲಾಧಿಕಾರಿಗೆ ಲಿಖಿತ ಮನವಿ ಸಲ್ಲಿಸುವಂತೆ ಶಿವಣ್ಣ ಸಲಹೆ ನೀಡಿದರು.
ವೀರಾಜಪೇಟೆ ಪೌರಕಾರ್ಮಿಕೆ ಗೌರಿ ಮಾತನಾಡಿ, ೨೫ ವರ್ಷದಿಂದ ನಾನು ಕೆಲಸ ಮಾಡುತ್ತಿದ್ದೇನೆ. ಪ್ರಾಕೃತಿಕ ವಿಕೋಪದಿಂದ ಪ.ಪಂ ಜಾಗದಲ್ಲಿ ನಿರ್ಮಿಸಿದ್ದ ಶೆಡ್ ಕುಸಿದಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು.
ವೀರಾಜಪೇಟೆ ಪೌರಕಾರ್ಮಿಕ ನವೀನ್ ಮಾತನಾಡಿ, ೫೦೦ ಜನರಿಗೆ ಓರ್ವ ಪೌರಕಾರ್ಮಿಕ ಎಂಬ ನೀತಿ ಮಾಡಿ ಕೆಲಸ ಕಳೆದುಕೊಂಡವರಿಗೆ ಉದ್ಯೋಗ ನೀಡುವಂತೆ ಮನವಿ ಮಾಡಿದರು.
ಕುಶಾಲನಗರದಲ್ಲಿ ವಸತಿ ವಂಚಿತ ೭ ಪೌರಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸಭೆ ನಡೆಸಿ ಕ್ರಮವಹಿಸಲಾಗಿದೆ ಎಂದು ಮುಖ್ಯಾಧಿಕಾರಿ ಕೃಷ್ಣಕುಮಾರ್ ಮಾಹಿತಿ ನೀಡಿದರು.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಾಜಶೇಖರ್, ಯೋಜನಾ ನಿರ್ದೇಶಕ ರಾಜು, ನಗರಸಭೆ ಪೌರಾಯುಕ್ತ ರಾಮದಾಸ್, ಕಾರ್ಮಿಕ ಅಧಿಕಾರಿ ಅನಿಲ್ ಬಗಾಡಿ, ಮೆಡಿಕಲ್ ಕಾಲೇಜು ಮುಖ್ಯಸ್ಥ ಡಾ. ಕಾರ್ಯಪ್ಪ, ಮೆಡಿಕಲ್ ಕಾಲೇಜ್ ಅಧೀಕ್ಷಕ ಡಾ. ಎ.ಜೆ ಲೋಕೇಶ್, ಆಯೋಗದ ಸಂಪನ್ಮೂಲ ವ್ಯಕ್ತಿ ರಘು, ಅಂಬೇಡ್ಕರ್ ನಿಗಮದ ಜಿಲ್ಲಾ ವ್ಯವಸ್ಥಾಪಕ ಚಂದ್ರಶೇಖರ್ ಸೇರಿದಂತೆ ಇನ್ನಿತರರು ಇದ್ದರು.
ಶಾಶ್ವತ ಸೂರು ಕಲ್ಪಿಸುವ ಭರವಸೆ
ಜಿಲ್ಲೆಯ ಪೌರಕಾರ್ಮಿಕರ ಸಮಸ್ಯೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಶಾಶ್ವತÀ ಸೂರಿಗೆ ಹೆಚ್ಚಿನ ಬೇಡಿಕೆ ಇದೆ. ಈ ಹಿನ್ನೆಲೆ ಕ್ರಮವಹಿಸಲಾಗುವುದು ಎಂದು ಶಿವಣ್ಣ ಭರವಸೆ ನೀಡಿದರು.
ಸಂವಾದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು, ಈಗಾಗಲೇ ಮಡಿಕೇರಿ ವ್ಯಾಪ್ತಿಯಲ್ಲಿ ೧ ಎಕರೆ ಜಾಗ ಗುರುತಿಸಲಾಗಿದೆ. ಅವರಿಗೆ ಮನೆ ನಿರ್ಮಾಣ ಮಾಡಲಾಗುತ್ತದೆ. ಮ್ಯಾನ್ಯುಯಲ್ ಸ್ಕಾö್ಯವೆಂಜರ್ ಕಾಯ್ದೆ ಹಾಗೂ ಕಾರ್ಯಚಟುವಟಿಕೆ ಬಗ್ಗೆ ಅರಿವು ಕಾರ್ಯಕ್ರಮ ರೂಪಿಸಲಾಗಿದೆ. ಸಫಾಯಿ ಕರ್ಮಚಾರಿಗೆ ಕಾರ್ಯಗಾರ ಆಯೋಜಿಸಿದ್ದೇವೆ. ಪೌರಕಾರ್ಮಿಕರ ಸ್ಥಿತಿಗತಿ ಅಭಿವೃದ್ಧಿ ಪಡಿಸಲಾಗುತ್ತದೆ. ಪೌರಕಾರ್ಮಿಕರು ಸಮಸ್ಯೆ ಹಲವಾರಿವೆ. ಇದನ್ನು ನಿವಾರಿಸಿ ಅವರನ್ನು ಮುಂದೆ ತರುವುದು ಆಯೋಗದ ಉದ್ದೇಶವಾಗಿದೆ. ‘ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ’ದ ವರದಿ ಪ್ರಕಾರ ಸರಕಾರದ ಯೋಜನೆ ಪೌರಕಾರ್ಮಿಕರಿಗೆ ಶೇ ೩ ರಷ್ಟು ಮಾತ್ರ ತಲುಪಿದೆ. ಗುತ್ತಿಗೆಯಲ್ಲಿರುವ ಪೌರಕಾರ್ಮಿಕರಿಗೆ ತೊಂದರೆ ಇದೆ. ಸುರಕ್ಷತಾ ಪರಿಕರಗಳು ವೈಜ್ಞಾನಿಕವಾಗಿಲ್ಲ. ಗುಣಮಟ್ಟ ದೃಢೀಕೃತ ಶೂ, ಗ್ಲೌಸ್, ಮಾಸ್ಕ್ನ್ನು ತರಿಸಿದ್ದೇವೆ. ಅದನ್ನು ವಿತರಿಸಲಾಗುತ್ತದೆ. ಜಿಲ್ಲಾ ಜಾಗೃತಿ ಸಮಿತಿ ಪರಿಣಾಮಕಾರಿಯಾಗಿರಬೇಕು. ಪೌರಕಾರ್ಮಿಕರಿಗೆ ವಿಶ್ರಾಂತಿ ಗೃಹ ನಿರ್ಮಿಸುವ ಗುರಿ ಇದೆ. ಮ್ಯಾನ್ಯುಯಲ್ ಸ್ಕಾö್ಯವೆಂಜರ್ ನಿಷೇಧವಾಗಿದ್ದರು ಅಲ್ಲಲ್ಲಿ ಇದು ಕಂಡುಬರುತ್ತಿದೆ. ಇದನ್ನು ಕಟ್ಟುನಿಟ್ಟಾಗಿ ನಿಷೇಧ ಮಾಡುವ ಉದ್ದೇಶವಿದೆ. ಈ ಬಗ್ಗೆ ಪ್ರಕರಣಗಳು ಕಂಡುಬAದರೆ ಕಾನೂನು ಕ್ರಮ ವಿಧಿಸಲಾಗುವುದು ಎಂದು ಎಚ್ಚರಿಸಿದರು.
ಕಾಲೋನಿಗೆ ಭೇಟಿ: ನಗರದ ರಾಣಿಪೇಟೆಯ ನಗರಸಭೆ ಪೌರಕಾರ್ಮಿಕರ ಕಾಲೋನಿಗೆ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಶಿವಣ್ಣ ಭೇಟಿ ನೀಡಿದರು. ಪೌರಕಾರ್ಮಿಕರ ಕುಟುಂಬದೊAದಿಗೆ ಚರ್ಚಿಸಿದ ಶಿವಣ್ಣ ಅವರು, ಪುನರ್ವಸತಿ ಕಲ್ಪಿಸುವ ಭರವಸೆ ನೀಡಿದರು. ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು. ಮಕ್ಕಳನ್ನು ವಸತಿ ಶಾಲೆಗೆ ದಾಖಲಿಸುವಂತೆ ಸಲಹೆ ನೀಡಿದರು.
ಸಾಮಾಜಿಕ, ಆರ್ಥಿಕವಾಗಿ ಮುನ್ನೆಲೆಗೆ ಬರಬೇಕು. ಈ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಸರಕಾರಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಪೌರಕಾರ್ಮಿಕರ ಸ್ಥಿತಿಗತಿಗಳನ್ನು ರಾಜ್ಯ ಸರಕಾರದ ಮುಂದಿಡಲಾಗುವುದು. ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪೌರಕಾರ್ಮಿಕರಿಗಾಗಿ ಮನೆ ನಿರ್ಮಾಣಕ್ಕೆ ನಗರದ ಹೊರವಲಯದ ಉಕ್ಕುಡದಲ್ಲಿ ಗುರುತಿಸಿರುವ ಜಾಗಕ್ಕೆ ಶಿವಣ್ಣ ಭೇಟಿ ನೀಡಿ ಯೋಜನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ವಸತಿ ಯೋಜನೆಗಳನ್ನು ಬಳಸಿಕೊಂಡು ವಸತಿ ಕಲ್ಪಿಸುವಂತೆ ನಿರ್ದೇಶನ ನೀಡಿದರು.
ಅಧಿಕಾರಿಗಳೊಂದಿಗೆ ಸಭೆ: ನಂತರ ಅಧಿಕಾರಿಗಳ ಜೊತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದ ಆಯೋಗದ ಅಧ್ಯಕ್ಷರು ಸ್ಥಳೀಯ ಸಂಸ್ಥೆಗಳು, ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕೆಎಸ್ಆರ್ಟಿಸಿ ಮತ್ತಿತರ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಕಡ್ಡಾಯವಾಗಿ ಸರ್ಕಾರದ ನಿರ್ದೇಶನದಂತೆ ವೇತನ ಪಾವತಿಸಬೇಕು. ಭವಿಷ್ಯ ನಿಧಿ ಕಟಾವಣೆ ಮಾಡಬೇಕು ಎಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ಸೂಚಿಸಿದರು.
ಮ್ಯಾನ್ಯುವೆಲ್ ಸ್ಕಾö್ಯವೆಂಜಿAಗ್ ನಿಷೇಧ ಮಾಡಿದ್ದರೂ ಸಹ ಅಲ್ಲಲ್ಲಿ ವರದಿಗಳು ಕಂಡು ಬರುತ್ತಿರುವುದರಿಂದ ಪ್ರತಿನಿತ್ಯ ನ್ಯಾಯಾಲಯಕ್ಕೆ ಆಯೋಗದಿಂದ ಮಾಹಿತಿ ನೀಡುವುದೇ ಆಗಿದೆ. ಆದ್ದರಿಂದ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸರ್ಕಾರದ ನಿರ್ದೇಶನದಂತೆ ಪೌರಕಾರ್ಮಿಕರಿಗೆ ವೇತನ ಪಾವತಿಸಬೇಕು. ಪಿಎಫ್ ಪಾವತಿಸದಿದ್ದಲ್ಲಿ ಕೂಡಲೇ ಪಾವತಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂಬAಧ ಸ್ಥಳೀಯ ಸಂಸ್ಥೆಗಳು ಮತ್ತು ಸಂಬAಧಪಟ್ಟ ಇಲಾಖೆಗಳಿಂದ ಮಾಹಿತಿ ಪಡೆಯುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ ಅವರು ಪೌರ ಕಾರ್ಮಿಕರ ಸಂಬAಧ ನಿಖರ ಮಾಹಿತಿ ಒದಗಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯ ಸಮಿತಿ ಸದಸ್ಯರಾದ ನಾಗರಾಜು, ವೆಂಕಟೇಶ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಾರ್ಯಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರಾಜು, ಪೌರಾಯುಕ್ತರಾದ ಎಸ್.ವಿ. ರಾಮದಾಸ್,, ಡಿವೈಎಸ್ಪಿ ದಿನೇಶ್ ಕುಮಾರ್, ಜಿ.ಪಂ.ಯೋಜನಾಧಿಕಾರಿ ಶ್ರೀಕಂಠಮೂರ್ತಿ, ಲಕ್ಷಿö್ಮÃ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕÀ ಮಚ್ಚಾಡೋ, ತಹಶೀಲ್ದಾರರಾದ ಗೋವಿಂದರಾಜು, ಮಹೇಶ್, ಕೆಎಸ್ಆರ್ಟಿಸಿ ಘಟಕ ವ್ಯವಸ್ಥಾಪಕಿ ಗೀತಾ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಚಂದ್ರಶೇಖರ್, ಪ.ಪಂ. ಮುಖ್ಯಾಧಿಕಾರಿಗಳಾದ ಶ್ರೀಧರ, ಕೃಷ್ಣ ಪ್ರಸಾದ್ ಇತರರು ಇದ್ದರು.