ಮಡಿಕೇರಿ, ಮಾ. ೮: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಐಮಂಡ ಪೊಮ್ಮಕ್ಕಡ ಕೂಟ ಇವರ ಸಹಯೋಗದಲ್ಲಿ ತಾ.೯ ರಂದು (ಇಂದು) ಮರಗೋಡುವಿನಲ್ಲಿ ಅಂತಾರಾಷ್ಟಿçÃಯ ಮಹಿಳಾ ದಿನಾಚರಣೆ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಪ್ರಯುಕ್ತ ನಾನಾ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿದೆ. ಐಮಂಡ ಪೊಮ್ಮಕ್ಕಡ ಕೂಟದ ಸದಸ್ಯರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ನಡೆಯಲಿದೆ.

ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಬೋಡುಕುಟ್ಟಡ ರಾಧಿಕಾ ಕುಟ್ಟಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಕಾಡೆಮಿ ಅಧ್ಯಕ್ಷೆ ಡಾ. ಪಾರ್ವತಿ ಅಪ್ಪಯ್ಯ, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಐಮಂಡ ಪುಷ್ಪಾವತಿ, ಮರಗೋಡು ಗ್ರಾಮ ಪಂಚಾಯತಿ ಅಧ್ಯಕ್ಷೆ ಐಯ್ಯಂಡ್ರ ಪೂರ್ಣಿಮಾ ಶ್ರೀನಿವಾಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಅಮ್ಮತ್ತೀರಾ ರೇವತಿ ಪರಮೇಶ್ವರ್ ‘ಕಾಲಕೊತ್ತನೆಕೆ ಪೊಮ್ಮಕ್ಕಡ ಬದ್ಕ್ಲ್ ಬದಲಾವಣೆ’ ಎಂಬ ವಿಷಯದ ಮೇಲೆ ವಿಚಾರ ಮಂಡನೆ ಮಾಡಲಿದ್ದಾರೆ. ಇದೇ ವೇಳೆ 'ಕೊಡಗ್ ರ ಸಂಸ್ಕೃತಿ ಸಂಸ್ಕಾರ ಬೊಳಚೆಲ್ ಅವ್ವಂಗಡ ಪಾತ್ರ' ವಿಷಯದ ಮೇಲೆ ಐಮಂಡ ದಿವ್ಯಾ ಅವರು ವಿಚಾರ ಮಂಡಿಸಲಿದ್ದಾರೆ.