ಮಡಿಕೇರಿ, ಮಾ. ೮: ತಾಲೂಕಿನ ಶ್ರೀ ಭಗಂಡೇಶ್ವರ–ತಲಕಾವೇರಿ ದೇವಾಲಯದಲ್ಲಿ ಪ್ರತೀ ವರ್ಷ ಸಂಪ್ರದಾಯದAತೆ ಮಹಾಶಿವರಾತ್ರಿಯನ್ನು ನಡೆಸಿಕೊಂಡು ಬರುತ್ತಿದ್ದು, ಈ ವರ್ಷವೂ ತಾ. ೧೧ ರಂದು ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಬೆಳಿಗ್ಗೆ ೭ ಗಂಟೆಗೆ ಶತರುದ್ರಾಭೀಷೇಕ, ಬೆಳಿಗ್ಗೆ ೯.೩೦ ಗಂಟೆಗೆ ಮಹಾ ರುದ್ರಹೋಮ, ೧೨ ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ ೬ ಗಂಟೆಗೆ ತ್ರಾಯಂಬಕ ಸೇವೆ, ಸಂಜೆ ೬.೩೦ ಗಂಟೆಯಿAದ ಏಕದಶ ರುದ್ರಾಭಿಷೇಕ, ಮಹಾ ಮಂಗಳಾರತಿ ದೇವರ ನೃತ್ಯ ಉತ್ಸವ ನಡೆಯಲಿದೆ.
ಶ್ರೀ ತಲಕಾವೇರಿ ದೇವಾಲಯದಲ್ಲ್ಲಿ ಬೆಳಿಗ್ಗೆ ೯.೩೦ ಗಂಟೆಗೆ ಶತರುದ್ರಾಭೀಷೇಕ, ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಸಂಜೆ ೭ ಗಂಟೆಗೆ ಏಕದಶರುದ್ರಾಭಿಷೇಕ ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಲಿದೆ.
ನಂತರ ರಾತ್ರಿ ೧೧ ಗಂಟೆಗೆ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ, ಸರಪಾಡಿ ಬಂಟ್ವಾಳ ತಾಲೂಕು ದ.ಕ ಪ್ರಸಂಗ ಇವರಿಂದ ಭಸ್ಮಾಸುರ ಮೋಹಿನಿ-ಶಬರಿಮಲೆ ಅಯ್ಯಪ್ಪ ಯಕ್ಷಗಾನ ನಡೆಸಿಕೊಡಲಿದ್ದಾರೆ ಎಂದು ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಅವರು ತಿಳಿಸಿದ್ದಾರೆ.