ಸಿದ್ದಾಪುರ, ಮಾ. ೬: ಗುಹ್ಯ ಗ್ರಾಮದ ಸ್ವಾಮಿ ವಿವೇಕಾನಂದ ಯುವಕ ಸಂಘದ ವತಿಯಿಂದ ಗುಹ್ಯ ಅಗಸ್ತೆö್ಯÃಶ್ವರ ದೇವಾಲಯದ ಮೈದಾನದಲ್ಲಿ ಹೊನಲು ಬೆಳಕಿನ ಕಬಡ್ಡಿ ಹಾಗೂ ಗ್ರಾಮೀಣ ಕ್ರೀಡಾಕೂಟ ನಡೆಯಿತು.

ಕಾರ್ಯಕ್ರಮವನ್ನು ಗ್ರಾಮದ ಹಿರಿಯ ರಾಮಚಂದ್ರ ರಾವ್ ಉದ್ಘಾಟಿಸಿ ಶುಭ ಹಾರೈಸಿದರು. ಬಳಿಕ ಮಹಿಳೆಯರಿಗೆ ಹಾಗೂ ಪುರುಷರಿಗೆ ಹಗ್ಗಜಗ್ಗಾಟ ಸ್ಪರ್ಧೆ, ಭಾರದ ಗುಂಡು ಎಸೆತ, ಮಕ್ಕಳ ಓಟದ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಜಿ.ಪಂ ಸದಸ್ಯ ಎಂ.ಎಸ್. ವೆಂಕಟೇಶ್, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಲು ಗ್ರಾಮ ಮಟ್ಟದ ಕ್ರೀಡಾಕೂಟ ಸಹಕಾರಿಯಾಗುತ್ತಿದ್ದು, ಗ್ರಾಮಸ್ಥರು ಒಗ್ಗೂಡಲು ಕ್ರೀಡಾಕೂಟವು ವೇದಿಕೆಯಾಗಿದೆ. ಗುಹ್ಯ ಗ್ರಾಮದಲ್ಲಿ ೮ಕ್ಕೂ ಅಧಿಕ ಕಬಡ್ಡಿ ತಂಡವಿದ್ದು, ೧೦೦ಕ್ಕೂ ಅಧಿಕ ಕ್ರೀಡಾಪಟುಗಳು ಇರುವುದು ಗ್ರಾಮೀಣ ಕ್ರೀಡಾಕೂಟದಿಂದ ಬೆಳಕಿಗೆ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮಾಜಿ ಸೈನಿಕ ಹಾಗೂ ಅಂರ‍್ರಾಷ್ಟಿçÃಯ ಅಥ್ಲೀಟ್, ಹೊಸೋಕ್ಲು ಚಿಣ್ಣಪ್ಪ ಮಾತನಾಡಿ, ಬಾಲ್ಯದಿಂದಲೇ ಮಕ್ಕಳಿಗೆ ಉತ್ತಮ ವೇದಿಕೆ ಕಲ್ಪಿಸಿದರೆ ಭವಿಷ್ಯದಲ್ಲಿ ಸಾಧಕರಾಗುತ್ತಾರೆ ಎಂದರು.

ಇದೇ ಸಂದರ್ಭ ಗ್ರಾಮದ ಯುವ ಕೃಷಿಕ ಪಟ್ಟಡ ಶ್ಯಾಂ ಅಯ್ಯಪ್ಪ, ಮಾಜಿ ಸೈನಿಕ ಹಾಗೂ ಅಂರ‍್ರಾಷ್ಟಿçÃಯ ಅಥ್ಲಿಟ್ ಹೊಸೋಕ್ಲು ಚಿಣ್ಣಪ್ಪ, ಉರಗಪ್ರೇಮಿ ಸ್ನೇಕ್ ಸುರೇಶ್, ದ್ವಿತೀಯ ಪಿ.ಯು.ಸಿ ಯಲ್ಲಿ ಅಧಿಕ ಅಂಕ ಪಡೆದ ಗ್ರಾಮದ ವಿದ್ಯಾರ್ಥಿನಿ ಹರ್ಷಿಕ, ಯೂತ್ ಹೆಲ್ತ್ ಕೇರ್ ಸಂಘಟನೆಯ ರಫೀಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಮಹೇಶ್ ಕುಮಾರ್, ಸದಸ್ಯರಾದ ಅಬಿತಾ ಗಿರೀಶ್, ಪ್ರೇಮಾ ಗೋಪಾಲ್, ಲೊಕೇಶ್, ದಾನಿಗಳಾದ ರಮೇಶ್, ಪಿ.ಕೆ ಚಂದ್ರನ್, ರಾಣಿ ನಾರಾಯಣ ಸಂಘದ ಅಧ್ಯಕ್ಷ ವಿಕ್ರಾಂತ್ ಸೇರಿದಂತೆ ಇನ್ನಿತರರು ಇದ್ದರು.

ಸೆವೆನ್ ಸ್ಟಾರ್ ತಂಡ ಚಾಂಪಿಯನ್

ಗುಹ್ಯ ಗ್ರಾಮ ಮಟ್ಟದ ಪ್ರೋ ಕಬಡ್ಡಿ ಪಂದ್ಯಾಟದಲ್ಲಿ ಸೆವೆನ್ ಸ್ಟಾರ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದ ಫೈನಲ್‌ನಲ್ಲಿ ಸೆವೆನ್ ಫೈರ‍್ಸ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಸೆವೆನ್ ಸ್ಟಾರ್ ತಂಡ ತನ್ನದಾಗಿಸಿಕೊಂಡಿತು. ಸ್ಟಾರ್ ಬಾಯ್ಸ್ ತಂಡ ತೃತೀಯ ಬಹುಮಾನ ಪಡೆದುಕೊಂಡಿತು. ಡೀಸೆಂಟ್ ಫ್ರೆಂಡ್ಸ್ ತಂಡ ಉತ್ತಮ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿತು. ಪಂದ್ಯಾಟವನ್ನು ವೀಕ್ಷಿಸಲು ಗುಹ್ಯ ಗ್ರಾಮದ ನೂರಾರು ಮಂದಿ ಆಗಮಿಸಿದ್ದರು.