ಮಡಿಕೇರಿ, ಮಾ. ೬: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್.ಎ.ಎಲ್) ಬೆಂಗಳೂರು ಇವರು ನಡೆಸುತ್ತಿರುವ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಡಿಪ್ಲೋಮೊ ಶಿಶಿಕ್ಷÄ ತರಬೇತಿ(ಡಿಪ್ಲೋಮೊ ಅಪ್ರಟಿಂಶೀಪ್ ಟ್ರೆöÊನಿಂಗ್)ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ

ಡಿಪ್ಲೋಮೊ ಏರೋನಾಟಿಕಲ್ ಇಂಜಿನಿಯರಿAಗ್, ಡಿಪ್ಲೋಮೊ ಇನ್ ಮೆಕ್ಯಾನಿಕಲ್ ಇಂಜಿನಿಯರಿAಗ್, ಡಿಪ್ಲೋಮೊ ಇನ್ ಎಲೆಕ್ಟಿçಕಲ್ ಎಂಡ್ ಎಲೆಕ್ಟಾçನಿಕ್ಸ್ ಇಂಜಿನಿಯರಿAಗ್, ಡಿಪ್ಲೋಮೊ ಇನ್ ಎಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿAಗ್, ಡಿಪ್ಲೋಮೊ ಇನ್ ಸಿವಿಲ್ ಇಂಜಿನಿಯರಿAಗ್, ಡಿಪ್ಲೋಮೊ ಕಂಪ್ಯೂಟರ್ ಸೈನ್ಸ್ ಎಂಡ್ ಇಂಜಿನಿಯರಿAಗ್/ ಇನ್ಫಾರ್‌ಮೇಷನ್ ಸ್ಯೆನ್ಸ್ ಎಂಡ್ ಇಂಜಿನಿಯರಿAಗ್, ಡಿಪ್ಲೋಮೊ ಇನ್ ಮೆಟಲರ್ಜಿ ಇಂಜಿನಿಯರಿAಗ್, ಡಿಪ್ಲೋಮೊ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಇವುಗಳಲ್ಲಿ ಯಾವುದಾದರು ಒಂದು ವೃತ್ತಿಯಲ್ಲಿ ಮೂರು ವರ್ಷಗಳ ಡಿಪ್ಲೋಮೊ ಪಾಸಾಗಿದ್ದು, ಪ್ರಮಾಣಪತ್ರ ಪಡೆದಿರುವವರು ಮಾತ್ರ ಅರ್ಜಿ ಸಲ್ಲಿಸಬಹುದು. ಈ ತರಬೇತಿಯ ಅವಧಿ ಒಂದು ವರ್ಷವಾಗಿರುತ್ತದೆ. ಅಭ್ಯರ್ಥಿಗಳನ್ನು ಅರ್ಹತಾ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಅರ್ಜಿಯೊಂದಿಗೆ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಡಿಪ್ಲೋಮೊ ಅಂಕಪಟ್ಟಿಗಳು ಹಾಗೂ ಡಿಪ್ಲೋಮ ಪ್ರಮಾಣ ಪತ್ರ, ಮೀಸಲಾತಿ ಪ್ರಮಾಣ ಪತ್ರಗಳನ್ನು ಸಲ್ಲಿಸತಕ್ಕದು. ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಯನ್ನು ತಿತಿತಿ.hಚಿಟ-iಟಿಜiಚಿ.ಛಿom ರಿಂದ ಪಡೆಯಬಹುದಾಗಿದೆ ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ ಇಲ್ಲಿಂದ ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಯನ್ನು ತಾ. ೮ ರೊಳಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ ಇಲ್ಲಿಗೆ ಸಲ್ಲಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ

ಕೊಡಗು ಜಿಲ್ಲಾ ಕೇಂದ್ರ ಗ್ರಂಥಾಲಯ ಮಡಿಕೇರಿ ವ್ಯಾಪ್ತಿಯಲ್ಲಿನ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಖಾಲಿ ಇರುವ ಸ್ಥಾನಗಳಿಗೆ ಮಾಹೆಯಾನ ರೂ. ೭ ಸಾವಿರ ಗೌರವ ಸಂಭಾವನೆ ಆಧಾರದ ಮೇಲೆ ನಿಗದಿಪಡಿಸಿದ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಖಾಲಿ ಇರುವ ಹುದ್ದೆಗಳಿಗೆ ಸಂಬAಧಪಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಅಭ್ಯರ್ಥಿಗಳು ಮಾತ್ರ ಅರ್ಜಿಗಳನ್ನು ಸಂಬAಧಿಸಿದ ಗ್ರಾಮ ಪಂಚಾಯಿತಿಗಳಿAದ ಪಡೆಯುವುದು.

ಖಾಲಿ ಇರುವ ಹುದ್ದೆಗಳ ಮೀಸಲಾತಿ ವಿವರ: ವೀರಾಜಪೇಟೆ ತಾಲೂಕಿನ ಹೊಸೂರು ಅಮ್ಮತ್ತಿ ಗ್ರಾ.ಪಂ. ಗ್ರಂಥಾಲಯ ಸಾಮಾನ್ಯ ಅಭ್ಯರ್ಥಿ (ಮಾ.ಸೈ) ಮತ್ತು ಆಲೂರು-ಸಿದ್ದಾಪುರ ಗ್ರಾ.ಪಂ. ಗ್ರಂಥಾಲಯ ೨ಎ(ಸಾ.ಅ). ಸೋಮವಾರಪೇಟೆ ತಾಲೂಕು ಶಿರಂಗಾಲ ಗ್ರಾ.ಪಂ. ಗ್ರಂಥಾಲಯ ಸಾ.ಅ(ಸಾ.ಅ) ಮತ್ತು ಚೆಂಬೆ ಬೆಳ್ಳೂರು ಗ್ರಾ.ಪಂ. ಗ್ರಂಥಾಲಯ ಪ್ರವರ್ಗ-೧(ಮಹಿಳಾ ಅಭ್ಯರ್ಥಿ). ಅರ್ಜಿ ಸಲ್ಲಿಸಲು ತಾ. ೩೦ ಕೊನೆಯ ದಿನವಾಗಿದೆ.

ವಿದ್ಯಾರ್ಹತೆಯ ಹಾಗೂ ಇತರೆ ದಾಖಲೆಗಳನ್ನು ದೃಢೀಕರಿಸಿದ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿ ಸಂಬAಧಪಟ್ಟ ಗ್ರಾ.ಪಂ. ಕಚೇರಿಗೆ ಸಲ್ಲಿಸುವುದು. ಹೆಚ್ಚಿನ ವಿವರಗಳಿಗೆ ಮುಖ್ಯ ಗ್ರಂಥಾಲಯಾಧಿಕಾರಿಯವರ ಕಚೇರಿ, ಜಿಲ್ಲಾ ಕೇಂದ್ರ ಗ್ರಂಥಾಲಯ, ಮಡಿಕೇರಿ ದೂ. ೦೮೨೭೨ ೨೨೫೪೬೩ ಅಥವಾ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ತಿಳಿಸಿದ್ದಾರೆ.